ಜೀವನಶೈಲಿ

ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ: ಬಣ್ಣದಿಂದಾಗುವ ಅಪಾಯಗಳು ಗೊತ್ತೆ ?

Nagaraja AB

ನವದೆಹಲಿ: ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ ಉಳಿದಿದೆ.  ಹೋಳಿ ಹಬ್ಬ ಭಾರತೀಯ ಹಬ್ಬಗಳಲ್ಲಿ ಒಂದಾಗಿದ್ದು,  ತಮ್ಮ ಇಷ್ಟಪಾತ್ರರಿಗೆ ಬಣ್ಣದ ನೀರು,  ಪೌಡರ್ ಎರಚಿ ಸಂಭ್ರಮಿಸಲಾಗುತ್ತದೆ.

ಆದರೆ, ಈ ಬಣ್ಣಗಳಿಂದ ಅಷ್ಟೇ ಅಪಾಯವೂ ಇದೆ. ಆಕ್ಸೈಡ್,ಮಾರ್ಕ್ಯೂರಿ ಸಲ್ಪೇಟ್, ತಾಮ್ರ ಸಲ್ಪೇಟ್ ಮತ್ತಿತರ ರಾಸಾಯನಿಕ ಬಳಸಿ ತಯಾರಿಸಿದ ಬಣ್ಣಗಳಿಂದ    ಕಣ್ಣು, ಚರ್ಮ, ಶ್ವಾಸಕೋಶಕ್ಕೆ ತೊಂದರೆಯಾಗಲಿದೆ ಎಂದು ತಜ್ಞರು ಹೇಳುತ್ತಾರೆ.

ರಾಸಾಯನಿಕ ಮತ್ತು ಮನೆಯಲ್ಲಿಯೇ ತಯಾರಿಸಿದ ಬಣ್ಣದಿಂದ ಹೋಳಿ ಹಬ್ಬ ಆಚರಿಸಿ ಸಂಭ್ರಮಿಸಬೇಕು ಹಾಗೂ ಚರ್ಚೆ ಮತ್ತು ಕೂದಲಿಗೆ ತೊಂದರೆಯಾಗದಂತೆ ಸೂಕ್ತ ಪರ್ಯಾಯ ಮಾರ್ಗ ಅನುಸರಿಸುವಂತೆ ಬ್ಯೂಟಿ ಎಕ್ಸ್ ಪರ್ಟ್  ಶಾಹಜ್ ಹುಸೇನ್  ಸಲಹೆ ನೀಡುತ್ತಾರೆ

ಹೋಳಿ ಹಬ್ಬದಲ್ಲಿ ಬಳಸುವ ಗುಲಾಲ್  ಕೂಡಾ ರಾಸಾಯನಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿದ್ದು, ಚರ್ಮದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಆದ್ದರಿಂದ ಹೊರಗಡೆ ಹೋಗುವಾಗ  ಸೂರ್ಯಕಿರಣಗಳಿಂದ ತಪ್ಪಿಸಿಕೊಳ್ಳಬೇಕಾದಂತಹ  ಕ್ರೀಮ್ ಹಚ್ಚುವಂತೆ ಅವರು ಸಲಹೆ ನೀಡಿದ್ದಾರೆ.

ಕೂದಲಿಗೆ ತೆಂಗಿನ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ ಹಾಗೂ ಬೆರಳಿಗೆಬಣ್ಣ ಹಾಕುವುದರಿಂದ ಅನುಕೂಲವಿದೆ. ತಣ್ಣೀರಿನೊಳಗೆ  ಮುಖ ಅದ್ದಿ ನಂತರ ಕ್ರೀಮ್ ಹಚ್ಚಿ,ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳುವ ಮೂಲಕ ಮುಖಕ್ಕೆ ಹಚ್ಚಿದ ಬಣ್ಣ ತೆಗೆಯಬಹುದು.

ಈ ರೀತಿಯ ಕ್ರೀಮ್ ನ್ನು ಮನೆಯಲ್ಲಿಯೇ ತಯಾರಿಸಬಹುದು,
ಅರ್ಧ ಗ್ಲಾಸ್  ಹಾಲಿನೊಳಗೆ  ಸೂರ್ಯಕಾಂತಿ ತರಹದ ಎಣ್ಣೆ ಬೆರೆಸಿ ಚೆನ್ನಾಗಿ ಕಲಾಯಿಸಿ ಚರ್ಮದ ಸುತ್ತ ಹಚ್ಚುವುದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣ ತೆಗೆಯಬಹುದಾಗಿದೆ.

ಹೋಳಿ ಹಬ್ಬದ ನಂತರ ಅರ್ಧ ಕಪ್ ಮೊಸರಿನೊಂದಿಗೆ ಎರಡು
ಸ್ಪೂನ್ ಜೀನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಾಯಿಸಬೇಕು.ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಾಕಿ 20 ನಿಮಿಷದ ನಂತರ ನೀರಿನಲ್ಲಿ ತೊಳೆಯುವುದರಿಂದ ಬಣ್ಣವೂ ಹೋಗುತ್ತದೆ ಚರ್ಮವೂ ಸುಂದರವಾಗಿರುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

SCROLL FOR NEXT