ಸಾಂದರ್ಭಿಕ ಚಿತ್ರ 
ಜೀವನಶೈಲಿ

ಜೀವನಶೈಲಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡರೆ ಡಯಾಬಿಟಿಸ್ ತಡೆಯಬಹುದು!

ಸಕ್ಕರೆ ಕಾಯಿಲೆ ಎಂಬುದು ದೀರ್ಘಕಾಲದ ರೋಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯವಾಗಿದೆ...

ನವದೆಹಲಿ: ಸಕ್ಕರೆ ಕಾಯಿಲೆ ಎಂಬುದು ದೀರ್ಘಕಾಲದ ರೋಗವಾಗಿದ್ದು ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯವಾಗಿದೆ. ಇನ್ಸುಲಿನ್ ಕೊರತೆ ಮತ್ತು ವಂಶೀಯ ಕಾರಣಗಳು ಸಕ್ಕರೆ ಕಾಯಿಲೆಗಳಿಗೆ ಕಾರಣವಾದರೂ ಕೂಡ ಜನರ ಜೀವನಶೈಲಿ ಕೂಡ ಸಕ್ಕರೆ ಕಾಯಿಲೆ ಬರಲು ಕಾರಣವಾಗಿದೆ.

ಉತ್ತಮ ಪೌಷ್ಟಿಕಾಂಶ ಆಹಾರ ಸೇವನೆ ಕೊರತೆ, ವ್ಯಾಯಾಮದ ಕೊರತೆ ಮತ್ತು ಜೀವನದಲ್ಲಿ ಅತಿಯಾದ ಒತ್ತಡ ಮನುಷ್ಯನ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸುತ್ತದೆ. ಮನುಷ್ಯ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಪ್ರಮುಖ ವ್ಯತ್ಯಾಸಗಳನ್ನು ಕಾಣಬಹುದು.

ಇಂದ್ರಪ್ರಸ್ತ ಅಪೊಲೊ ಆಸ್ಪತ್ರೆಯ ಎಂಡೋಕ್ರೈನಾಲಜಿ ಮತ್ತು ಹಿರಿಯ ಸಲಹೆಗಾರ ಎಸ್ ಕೆ ವಂಗ್ನೂ ಅವರು ಹೇಳುವ ಪ್ರಕಾರ ಜೀವನಶೈಲಿಯಲ್ಲಿ ಬದಲಾವಣೆಯಿಂದ ಡಯಾಬಿಟಿಸ್ ನ್ನು ನಿಯಂತ್ರಿಸಬಹುದು.

ಉತ್ತಮ ಗಾಳಿ ಸೇವನೆ:
ಲಾನ್ಸೆಟ್ ನ ಇತ್ತೀಚಿನ ವರದಿ ಪ್ರಕಾರ, ವಾಯುಮಾಲಿನ್ಯ ಡಯಾಬಿಟಿಸ್ ಗೆ ಕಾರಣವಾಗುತ್ತದೆ. ಕೆಟ್ಟ ಹೊಗೆ, ಮಾಲಿನ್ಯ ನಮ್ಮ ದೇಹದ ಒಳಗೆ ಹೋದರೆ ಇನ್ಸುಲಿನ್ ಕ್ರಿಯೆ ನಡೆಸುವುದನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನಾವು ಉತ್ತಮ ಗಾಳಿ ಸೇವಿಸುವುದು ಮುಖ್ಯವಾಗುತ್ತದೆ. ಜನರು ಶೇಕಡಾ 80ರಷ್ಟನ್ನು ಸಮಯವನ್ನು ಮನೆ, ಆಫೀಸುಗಳ ಒಳಗೆ ಕಳೆಯುವುದರಿಂದ ಉತ್ತಮ ಗಾಳಿ ಶುದ್ಧೀಕರಿಸುವ ಯಂತ್ರವನ್ನು ಅಳವಡಿಸಿಕೊಳ್ಳುವುದು ಉತ್ತಮ.

ಸಾಕಷ್ಟು ನೀರು ಕುಡಿಯಿರಿ, ಮದ್ಯಪಾನದಿಂದ ದೂರವಿರಿ: ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ನೀರು ಕುಡಿಯುವುದು ಅವಶ್ಯಕ. ಕೃತಕ, ರಾಸಾಯನಿಕ ಪುಡಿ ಮಿಶ್ರಣ ಮಾಡಿದ ಜ್ಯೂಸ್ ಗಳನ್ನು ಕುಡಿಯುವ ಬದಲು ಶುದ್ಧ ನೀರು ಕುಡಿಯುವುದು ಒಳ್ಳೆಯದು. ಹೆಚ್ಚೆಚ್ಚು ನೀರು ಸೇವಿಸುವುದರಿಂದ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಮತ್ತು ಇನ್ಸುಲಿನ್ ಕ್ರಿಯೆ ಸಹಜವಾಗಿರುತ್ತದೆ. ಮದ್ಯಪಾನದಿಂದ ಆದಷ್ಟು ದೂರವಿರುವುದು ಉತ್ತಮ. ಇದರಿಂದ ಬೊಜ್ಜು ಬೆಳೆಯುವುದನ್ನು ತಡೆಯಬಹುದು, ಬಿ.ಪಿ, ಹೃದಯದ ಕಾಯಿಲೆಗಳನ್ನು ತಡೆಯಬಹುದು.

ಧೂಮಪಾನದಿಂದ ದೂರವಿರಿ: ಸಿಗರೇಟು ಸೇವನೆ ಕೂಡ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ. ಸಿಗರೇಟು ಸೇವಿಸುವವರಲ್ಲಿ ಸಕ್ಕರೆ ಕಾಯಿಲೆ ಪ್ರಮಾಣ ಅಧಿಕವಾಗಿರುತ್ತದೆ. ಅಲ್ಲದೆ ಇದರಿಂದ ಹೃದ್ರೋಗ ಸಮಸ್ಯೆ, ಕ್ಯಾನ್ಸರ್, ಟಿಬಿ ಮೊದಲಾದವು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಯುಮಾಲಿನ್ಯ ಗಂಭೀರ ವಿಷಯವಾಗಿದ್ದು ಇಂಧನ ಕಲಬೆರಕೆ, ವಾಹನದಿಂದ ಹೊರಬರುವ ಹೊಗೆ, ಸಂಚಾರ ದಟ್ಟಣೆಯಿಂದ ವಾಯುಮಾಲಿನ್ಯ ದಟ್ಟವಾಗಿದೆ. ಇಂದು ಭಾರತದಲ್ಲಿ ಬಹುತೇಕ ಮಂದಿಗೆ ಶುದ್ಧ ಉರಿಯುವ ಇಂಧನ ಸಿಗುವುದು ಕೊರತೆಯಾಗಿದೆ, ಹೀಗಾಗಿ ಬಯೋಮಾಸ್ ದಹನವನ್ನು ಅಡುಗೆ ಇಂಧನವಾಗಿ ಬಳಸಲಾಗುತ್ತದೆ. ಇದರಿಂದ ಮಾಲಿನ್ಯವಾಗುವುದು ಹೆಚ್ಚು ಎನ್ನುತ್ತಾರೆ ಮೇದಾಂತ ನಿರ್ದೇಶಕ ಬೀನಾ ಬನ್ಸಲ್.

ಅಧಿಕ ವಾಯುಮಾಲಿನ್ಯದಿಂದ ತಕ್ಷಣದ ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡು ಹೃದಯರಕ್ತನಾಳದ ಮತ್ತು ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು, ಹೃದಯ ಮತ್ತು ಶ್ವಾಸಕೋಶಗಳಿಗೆ ಒತ್ತಡವನ್ನು ಉಂಟುಮಾಡುತ್ತದೆ, ಇದು ದೇಹವನ್ನು ಆಮ್ಲಜನಕದೊಂದಿಗೆ ಪೂರೈಸಲು ಕಷ್ಟವಾಗಿಸುತ್ತದೆ ಮತ್ತು ಉಸಿರಾಟದ ವ್ಯವಸ್ಥೆಯಲ್ಲಿ ಕೋಶಗಳನ್ನು ಹಾನಿಗೊಳಿಸಬಹುದು ಎಂದು ವೈದ್ಯರು ಹೇಳುತ್ತಾರೆ.

ನಮ್ಮ ದೇಶದಲ್ಲಿ ಮನೆ, ಕಚೇರಿಯ ಒಳಗಿನ ವಾಯುಮಾಲಿನ್ಯ ಮಟ್ಟ ಹೊರಗಿನಿಂತ 5 ಪಟ್ಟು ಅಧಿಕವಾಗಿರುತ್ತದೆ. ಶೇಕಡಾ 90ರಷ್ಟು ಮಂದಿ ಮನೆಯ, ಕಚೇರಿ ಒಳಗಿರುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಆರೋಗ್ಯ ಕಾಪಾಡಲು ಮಾಲಿನ್ಯ ಕಡಿಮೆ ಮಾಡುವ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಬಳಸುವುದು ಉತ್ತಮ ಎನ್ನುತ್ತಾರೆ ಬ್ಲೂಏರ್ ನ ಭಾರತ ದೇಶದ ಮುಖ್ಯಸ್ಥ ಅರವಿಂದ್ ಛಬ್ರ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

SCROLL FOR NEXT