ಜೀವನಶೈಲಿ

ಸಾಮಾಜಿಕ ಬಂಧಗಳಿಂದ ನೆನಪುಗಳು ಹಸಿರು, ನೆನಪಿನ ಶಕ್ತಿ ಹೆಚ್ಚಳ

Srinivas Rao BV
ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗಿನ ಗಟ್ಟಿಯಾದ ಬಂಧ ನೆನಪುಗಳನ್ನು ಹಾಗೂ ನೆನಪಿನ ಶಕ್ತಿ ಕುಗ್ಗುವುದನ್ನು ಕಡಿಮೆ ಮಾಡುತ್ತದೆ. 
ಅಮೆರಿಕದ ಓಹಿಯೋ ವಿಶ್ವವಿದ್ಯಾನಿಲಯಲ್ಲಿ ಇಲಿಗಳ ಮೇಲೆ ನಡೆದಿರುವ ಪ್ರಯೋಗ ಇದನ್ನು ಸಾಬೀತುಪಡಿಸಿದ್ದು, ಏಕಾಂಗಿಯಾಗಿದ್ದ ಇಲಿಗಳ ಮೆದುಳಿನ ಆರೋಗ್ಯಕ್ಕೆ ಹೋಲಿಸಿದರೆ ಗುಂಪಿನಲ್ಲಿದ್ದ ಇಲಿಗಳ ಮೆದುಳಿನ ಆರೋಗ್ಯ ಅತ್ಯಂತ ಉತ್ತಮವಾಗಿತ್ತು ಎಂದು ತಿಳಿದುಬಂದಿದೆ. 
15-18 ತಿಂಗಳಿನವರೆಗಿನ ಇಲಿಗಳ ಮೇಲೆ ಪ್ರಯೋಗ ನಡೆಸಲಾಗಿದ್ದು, ಗುಂಪಿನಲ್ಲಿದ್ದ ಇಲಿಗಳು ಜೀವಿತಾವಧಿಯ ಕೊನೆಯಲ್ಲಿ ಈ ಹಿಂದೆ ನೋಡಿದ್ದನ್ನು ಹೆಚ್ಚು ನಿಖರವಾಗಿ ನೆನಪಿಟ್ಟಿಕೊಂಡಿದ್ದವು, ಆದರೆ ಗುಂಪಿನಲ್ಲಿರದ ಇಲಿಗಳಿಗೆ ನೆನಪಿನ ಶಕ್ತಿ ಕುಂದಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. 
ಮಾನವನಾಗಲೀ ಪ್ರಾಣಿಯಾಗಲಿ ಸಾಮಾಜಿಕ ಬಂಧಗಳು ಮೆದುಳಿನ, ನೆನಪಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ಸಾಮಾಜಿಕ ಬಂಧಗಳಿಂದ ಕಳಚಿಕೊಂಡರೆ ಮನುಷ್ಯನ ಮೆದುಳಿನ ಆರೋಗ್ಯ ಕ್ಷೀಣಿಸುತ್ತದೆ ಎಂದು ಸಂಶೋಧನಾ ತಂಡದಲ್ಲಿದ್ದ ಲೀಡ್ ರಿಸರ್ಚರ್ ಕಿರ್ಬಿ ಹೇಳಿದ್ದಾರೆ. 
SCROLL FOR NEXT