ಸಂತೋಷದ ಹುಡುಕಾಟದಲ್ಲಿ ನಿರಾಸೆಯಾಗುವ ಪ್ರಮೇಯವೇ ಹೆಚ್ಚು!
ಸಂತೋಷಕ್ಕಾಗಿ ಹುಡುಕುತ್ತಾ ಹೊರಟರೆ ನಮಗೆ ಕಾಡುವುದು ನಿರಾಸೆ ಎಂಬುದಕ್ಕೆ ನಮ್ಮಲ್ಲಿ ಹಲವು ಜನಜನಿತ ನುಡಿಗಟ್ಟುಗಳಿವೆ. ಇದನ್ನೇ ಹೊಸ ಅಧ್ಯಯನ ವರದಿಯೊಂದೂ ಹೇಳುತ್ತಿದ್ದು, ವರದಿಯ ಪ್ರಕಾರ ಸಂತೋಷದ ಹುಡುಕಾಟದಲ್ಲಿದ್ದರೆ, ನಿರಾಸೆಯಾಗುತ್ತದೆ.
ಸಂತೋಷವಾಗಿರುವುದಕ್ಕೆ ಸಂಬಂಧಿಸಿದಂತೆ ಜರ್ನಲ್ ಸೈಕೋನಮಿಕ್ ನಲ್ಲಿ ಸುಧೀರ್ಘ ಲೇಖನವೊಂದು ಪ್ರಕಟವಾಗಿದ್ದು, ಸಂತೋಷಕ್ಕಾಗಿ ಹುಡುಕುವವರು ಅಥವಾ ಕಾಯುವವರಿಗೆ ಸಮಯದ ಅಭಾವ ಕಾಡುತ್ತದೆಯಂತೆ. ಸಂತೋಷದ ಅನ್ವೇಷಣೆ ಕಾಲಕ್ಕೆ ಸಂಬಂಧಿಸಿದಂತೆ ಹೇಗೆ ಓರ್ವ ವ್ಯಕ್ತಿಯ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಅಧ್ಯಯನದ ಭಾಗವಾಗಿರುವ ರುಟ್ಜರ್ಸ್ ವಿಶ್ವವಿದ್ಯಾಲಯದ ಸಹ ಲೇಖಕ ಅಕಿಯಾಂಗ್ ಕಿಮ್ ವಿವರಿಸಿದ್ದು, ಸಂತೋಷಕ್ಕಾಗಿ ಅನ್ವೇಷಣೆಯಿಂದ ಕಾಲದ ಅಭಾವ ಕಾಡುತ್ತದೆ ಪರಿಣಾಮವಾಗಿ ಸಿಗುವುದು ನಿರಾಶೆ ಎಂದು ಹೇಳಿದ್ದಾರೆ.
ಅಧ್ಯಯನಕ್ಕೊಳಪಡಿಸಿದ್ದ ಎರಡು ತಂಡದವರಿಗೆ ಪ್ರತ್ಯೇಕ ಕಾರ್ಯಗಳಲ್ಲಿ ತೊಡಗಿಸಲಾಯಿತು. ಸಂತೋಷಕ್ಕಾಗಿ ಅನ್ವೇಷಣೆಯಲ್ಲಿ ತೊಡಗಿದ್ದ ಒಂದಷ್ಟು ಜನರು ಹೇಳಿದ ಸಮಯದ ಅಭಾವಕ್ಕಿಂತ ಸಂತೋಷವಾಗಿದ್ದ ಜನರು ಹೇಳಿದ ಸಮಯದ ಅಭಾವದ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಸಂತೋಷದ ಹುಡುಕಾಟದಲ್ಲಿದ್ದರೆ, ನಿರಾಸೆಯಾಗುತ್ತದೆ ಎಂಬುದನ್ನು ಅಧ್ಯಯನ ವರದಿ ಮೂಲಕ ಕಂಡುಕೊಳ್ಳಲಾಗಿದೆ. ಒಟ್ಟಾರೆ ಸಂತೋಷಕ್ಕಾಗಿ ಹುಡುಕಿದಷ್ಟೂ ನಿರಾಸೆ ಕಾಡುತ್ತದೆ ಎಂಬ ನಮ್ಮ ಪುರಾತನ ನಂಬಿಕೆಯ ಅಂಶವನ್ನೇ ಹೊಸ ಅಧ್ಯಯನ ವರದಿಯೂ ಧ್ವನಿಸುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos