ವೃದ್ಧರಲ್ಲಿ ಕಾಡುವ ಒಂಟಿತನ ಫೇಸ್ ಬುಕ್ ನಿಂದ ದೂರ!
ನಿಮ್ಮ ಅಜ್ಜ-ಅಜ್ಜಿಯಂದಿರಿಗೆ ಒಂಟಿತನ ಕಾಡುತ್ತಿದ್ದರೆ ಫೇಸ್ ಬುಕ್ ಬಳಕೆ ಮಾಡುವುದು ಹೇಗೆಂದು ಕಲಿಸಿ, ಅರೆ ಫೇಸ್ ಬುಕ್ ಗೂ ವೃದ್ಧಾಪ್ಯದ ಒಂಟಿತನಕ್ಕೂ ಏನು ಸಂಬಂಧ ಎಂದು ಕೆಳುತ್ತೀರಾ? ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುವುದರಿಂದ ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಒಂಟಿತನವನ್ನು ಕಡಿಮೆ ಮಾಡುವುದರಲ್ಲಿ ಸಾಮಾಜಿಕ ಜಾಲತಾಣಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ನ್ಯೂ ಮೀಡಿಯಾ ಹಾಗೂ ಸೊಸೈಟಿ ನಡೆಸಿರುವ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳು ಒಂಟಿತನ ನೀಗಿಸುವಲ್ಲಿ ಸಹಕಾರಿಯಾಗುತ್ತವೆ. ಪ್ರಮುಖವಾಗಿ ವೃದ್ಧರಲ್ಲಿ ಒಂಟಿತನ ನೀಗಿಸುವುದಕ್ಕೆ ಸಾಮಾಜಿಕ ಜಾಲತಾಣಗಳು ಸಹಕಾರಿಯಾಗುತ್ತವೆ ಎಂದು ಅಮೆರಿಕದ ಪೆನ್ಸಲ್ವೇನಿಯಾ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಎಸ್ ಶ್ಯಾಮ್ ಸುಂದರ್ ಹೇಳಿದ್ದಾರೆ.
60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ 200 ಜನರಿಗೆ ಒಂದು ವರ್ಷ ಫೇಸ್ ಬುಕ್ ನ್ನು ಬಳಕೆ ಮಾಡುವಂತೆ ಸೂಚಿಸಲಾಗಿತ್ತು. ಈ ಅವಧಿಯಲ್ಲಿ ವೃದ್ಧರು ಬಳಸಿದ್ದ ಫೇಸ್ ಬುಕ್ ಟೂಲ್ ಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಯಿತು. ಬಹುತೇಕ ವೃದ್ಧರು ತಾವು ಹೇಳಬೇಕೆಂದಿರುವುದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದರು ಅದಕ್ಕೆ ಬರುತ್ತಿದ್ದ ಪ್ರತಿಕ್ರಿಯೆಗಳು ವೃದ್ಧರಲ್ಲಿ ಸಾಮಾಜಿಕ ಸಂವಹನದ ಭಾವವನ್ನು ಮೂಡಿಸುತ್ತಿದ್ದವು ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವುದರಿಂದ ವೃದ್ಧರಿಗೆ ಒಂಟಿ ಕಾಡುವುದು ಕಡಿಮೆಯಾಗುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos