ಜೀವನಶೈಲಿ

ಶರೀರದ ಜೈವಿಕ ಗಡಿಯಾರ ಏರು ಪೇರಾಗುವುದರಿಂದ ಖಿನ್ನತೆಯ ಅಪಾಯ!

Srinivas Rao BV
ಲಂಡನ್: ಖಿನ್ನತೆ, ಮನಸ್ಸಿನ ಅಸ್ಥಿರತೆ, ಒಂಟಿತನ ಕಾಡುತ್ತಿದೆಯೇ? ಹಾಗಾದರೆ ದೇಹದ ಜೈವಿಕ ಗಡಿಯಾರದಲ್ಲಿ ಸಮಸ್ಯೆ ಖಂಡಿತಾ ಇರುತ್ತದೆ ಎನ್ನುತ್ತಿದ್ದಾರೆ ಸಂಶೋಧಕರು. 
ಲಾನ್ಸೆಟ್ ಸೈಕಿಯಾಟ್ರಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ ದೇಹದ ತಾಪಮಾನ, ಆಹಾರ ಸ್ವೀಕರಿಸುವ ಪದ್ಧತಿ ಸೇರಿದಂತೆ ವಿವಿಧ ಅಂಶಗಳನ್ನು ಜೈವಿಕ ಗಡಿಯಾರ ನಿಯಂತ್ರಿಸುತ್ತದೆ.  
ದೇಹದ ತಾಪಮಾನ, ಆಹಾರ ಸ್ವೀಕರಿಸುವ ಪದ್ಧತಿ ಏರುಪೇರಾದರೆ ಜೈವಿಕ ಗಡಿಯಾರದಲ್ಲಿ ಏರುಪೇರಾದರೆ ಮಾನಸಿಕ ಅಸ್ಥಿರತೆ, ಖಿನ್ನತೆ ಒಂಟಿತನ ಕಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.  37-73 91,105 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ವೇಳೆ ಖಿನ್ನತೆ, ಮನಸ್ಸಿನ ಅಸ್ಥಿರತೆ, ಒಂಟಿತನ ಕಾಡುವುದಕ್ಕೂ ಜೈವಿಕ ಗಡಿಯಾರ ಏರುಪೇರಾಗುವುದಕ್ಕೂ ಸಂಬಂಧವಿದೆ ಎಂದು ಸಂಶೋಧಕರು ಹೇಳಿದ್ದಾರೆ. 
SCROLL FOR NEXT