ಸಂಗ್ರಹ ಚಿತ್ರ 
ಜೀವನಶೈಲಿ

ಭಾರತದಲ್ಲಿ ಮೂರನೇ ಒಂದರಷ್ಟು ವಿವಾಹಿತ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ: ವರದಿ

ಭಾರತದಲ್ಲಿ ವಾಸಿಸಿಉರ್ವ ವಿವಾಹಿತ ಮಹಿಳೆಯರ ಪೈಕೆ ಸುಮಾರು ಮೂರನೇ ಒಂದರಷ್ಟು ಭಾಗದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. ಲಿಂಗಾಧಾರಿತ

ನವದೆಹಲಿ: ಭಾರತದಲ್ಲಿ ವಾಸಿಸಿಉರ್ವ ವಿವಾಹಿತ ಮಹಿಳೆಯರ ಪೈಕೆ ಸುಮಾರು ಮೂರನೇ ಒಂದರಷ್ಟು ಭಾಗದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ಹಿಂಸೆ ಅನುಭವಿಸಿದ್ದಾರೆ. ಲಿಂಗಾಧಾರಿತ  ದೌರ್ಜನ್ಯ, ಹಿಂಸೆ ಬಹಳ ವ್ಯಾಪಕ ಸಮಸ್ಯೆಯಾಗಿದೆ ಎಂದು ಅದ್ಯಯನ ವರದಿಯೊಂದು ಸಾಬೀತುಪಡಿಸಿದೆ.
ಗುಜರಾತ್ ವಡೋದರಾ ಮೂಲದ ಎನ್ಜಿಓ "ಸಹಜ್" ಮತ್ತು ಯುಕೆ ಮೂಲದ  "ಈಕ್ವಲ್ ಮೆಸರ್ಸ್ 2030" ಎಂಬನಾಗರಿಕ ಸಮಾಜ ಹಾಗೂ ಖಾಸಗಿ ಕ್ಷೇತ್ರದ ಸಂಘಟನೆಗಳ ಸಮೂಹ  ಸೇರಿ ಈ ಅದ್ಯಯನ ನಡೆಸಿದೆ.
ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ (ಎನ್ಎಚ್ಎಫ್ಎಸ್) 4 ರಿಂದ ಅಂಕಿ ಅಂಶಗಳನ್ನು ಉಲ್ಲೇಖಿಸಿ ನೀಡಲಾದ ವರದಿಯಂತೆ 15 ರಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಶೇ .27 ರಷ್ಟು ಮಂದಿ 15 ವರ್ಷದಿಂದಲೂ ದೈಹಿಕ ಹಿಂಸೆ ಅನುಭವಿಸಿದ್ದಾರೆ 
"ಒಂದು ಕಡೆ, ಭಾರತವು ಪ್ರಬಲ ಆರ್ಥಿಕ ಬೆಳವಣಿಗೆಯನ್ನು ಹೊಂದುತ್ತಿರುವ ರಾಷ್ಟ್ರವಾಗಿ ಕಂಡರೆ ಇನ್ನೊಂದೆಡೆ ಜಾತಿ, ವರ್ಗ ಅಥವಾ ಲಿಂಗಗಳ ಆಧಾರದ ಮೇಲೆ ತಾರತಮ್ಯವನ್ನು ಬಹುವಾಗಿ ಅನುಭವಿಸುವವವ್ರು ಇಲ್ಲಿದ್ದಾರೆ."ಲಿಂಗ ಸಮಾನತೆ ಆರೋಗ್ಯ, ಪೋಷಣೆ ಹಾಗೂ  ಮಹಿಳೆಯರ ಕಲ್ಯಾಣ ಕ್ಷೇತ್ರಗಳಲ್ಲಿ ದೇಶ ಬಹಳ ಹಿಂದೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ಭಾರತದಲ್ಲಿ ವಿವಾಹಿತ ಮಹಿಳೆಯರಲ್ಲಿ ಮೂರನೇ ಒಂದು ಭಾಗದಷ್ಟು ಮಹಿಳೆಯರು ಕೌಟುಂಬಿಕ ಹಿಂಸೆಗೆ ಈಡಾಗಿದ್ದಾರೆ.ಪತಿಯು ಪತ್ನಿಗೆ ಹಿಂಸೆ ನೀಡುವರೆಂದು ಅನೇಕರು ಒಪ್ಪಿಕೊಂಡಿದ್ದಾರೆ.ಭಾರತದಲ್ಲಿ ಇಂದಿಗೂ ಪುರುಷ ಪ್ರಧಾನ ಕೌಟುಂಬಿಕ ವ್ಯ್ವಸ್ಥೆಯ ಬೇರುಗಳು ಆಳಆಗಿದ್ದು ಇದರಿಂದ ಹೆಣ್ಣು ಹಾಗೂ ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ, ತಾರತಮ್ಯ ಧೋರಣೆಗೆ ಕಾರಣವಾಗಿದೆ.
ಭಾರತೀಯ ಬಾಲಕಿಯರು ಪುರುಷರಿಗೆ ಹೋಲಿಸಿದರೆ ಕಡಿಮೆ ಶಿಕ್ಷಣ ಪಡೆದಿರುತ್ತಾರೆ.ಅಲ್ಲದೆ ಅವರಿಗೆ ಗಂಡು ಮಕ್ಕಳಿಗಿಂತ ಕಡಿಮೆ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತದೆ. ಅವರು ಆರೋಗ್ಯದ ಕಡೆಗೆ ಸಹ ಪುರುಷರಷ್ಟು ಗಮನ ನೀಡುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಳಾಗಿದೆ. ಸಾಮಾಜಿಕ ರೂಢಿಗಳ ಪರಿಣಾಮದಿಂದ ದೇಶದ ನಾನಾ ಕಡೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗುತ್ತಿಲ್ಲ.
ಸರ್ಕಾರದ ಮಹತ್ವಾಕಾಂಕ್ಷೆಯ "ಬೇಟಿ ಬಚಾವೋ ಬೇಟಿ ಪಡಾವೋ" ಆಂದೋಲನದ ಹೊರತಾಗಿಯೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಸಾಮಾಜಿಕ ಸ್ಥಾನಮಾನ ದುರ್ಬಲಗೊಳ್ಳುತ್ತಿದೆ.ಬಾಲಕಿಯರ ಕಳಪೆ ಆರೋಗ್ಯ ಮತ್ತು ಮರಣದ ವಿಚಾರವಾಗಲಿ, ಹೆಣ್ಣು ಮಕ್ಕಳ ಜನನದ ಸಂಖ್ಯಾನುಪಾತವಾಗಲಿ ಆತಂಕಕಾರಿಯಾಗಿದೆ.
ಅಂತೆಯೇ, ರಾಜಕೀಯ ನಾಯಕತ್ವ ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಯಂತಹ ಸಮಯದಲ್ಲಿ ಸಹ ಮಹಿಳೆಯು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT