ಜೀವನಶೈಲಿ

ನಿತ್ಯ ಯೋಗ ಮಾಡುವುದರಿಂದ ವೀರ್ಯಾಣು ಗುಣಮಟ್ಟದಲ್ಲಿ ಸುಧಾರಣೆ!

Shilpa D
ನವದೆಹಲಿ: ನಿಯಮಿತವಾಗಿ ಯೋಗಭ್ಯಾಸ ಮಾಡುವುದರಿಂದ ಕೆಲವೊಮ್ಮೆ ಪದೇಪದೇ ಸ್ವಾಭಾವಿಕವಾಗಿ ಉಂಟಾಗುವ ಗರ್ಭಪಾತವನ್ನು ತಡೆಗಟ್ಟಬಹುದು ಹಾಗೂ ವೀರ್ಯದ ಗುಣಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ನವದೆಹಲಿಯ ಏಮ್ಸ್ 60 ಜೋಡಿಯ ಪುರುಷರ ಮೇಲೆ ಈ ಪ್ರಯೋಗ ನಡೆಸಿತ್ತು, ಅದರಲ್ಲಿ ನಿಯಮಿತವಾಗಿ ಯೋಗಭ್ಯಾಸ ಮಾಡುವ ಪುರುಷರಲ್ಲಿ ನೈಸರ್ಗಿಕ ಗರ್ಭಪಾತ ಪ್ರಮಾಣ ಕಡಿಮೆ ಹಾಗೂ ವೀರ್ಯದ ಗುಣಮಟ್ಟ ಹೆಚ್ಚಿರುವುದು ತಿಳಿದು ಬಂತು ಎಂದು  ಏಮ್ಸ್ ನ ಅನಾಟಮಿ ವಿಭಾಗದ ಪ್ರೊಫೆಸರ್  ರಿಮಾ ದಾದಾ ಹೇಳಿದ್ದಾರೆ,
ಈ ಪುರುಷರು ಹಿಂದೆ ಯೋಗ ಮಾಡುತ್ತಿರಲಿಲ್ಲ, ಅವರು 90 ದಿನಗಳ ಯೋಗಭ್ಯಾಸ ಮಾಡಿದ್ದರು. ಈ ಪುರುಷರ ವೀರ್ಯದಲ್ಲಿ ಫಲವತ್ತತೆ ಕಡಿಮೆಯಿದ್ದು  ಭ್ರೂಣ ಬೆಳವಣಿಗೆ ಸರಿಯಾಗಿ ಆಗುತ್ತಿರಲಿಲ್ಲ ಹೀಗಾಗಿ ಪದೇ ಪದಪದೇ ಗರ್ಭಪಾತವಾಗುತ್ತಿತ್ತು ಎಂದು ಹೇಳಿದ್ದಾರೆ.
ಅನಾರೋಗ್ಯಕರವಾದ ಧೂಮಪಾನ, ಅಧಿಕ ಮಧ್ಯಸೇವನೆ, ಫಾಸ್ಟ್ ಫುಡ್ ಅತಿಯಾದ ಸೇವನೆ, ಹಾಗೂ ಪೋಷಕಾಂಶಗಳ ಕೊರತೆ, ಜಡ ಜೀವನಶೈಲಿ,  ಅಧಿಕ ಮೊಬೈಲ್ ಫೋನ್ ಬಳಕೆ, ಮಾನಸಿಕ ಒತ್ತಡ . ಬೊಜ್ಜಿನ ಸಮಸ್ಯೆ ಆ್ಯಕ್ಸಿಡೇಟಿವ್ ಸ್ಟ್ರೆಸ್ ಗೆ ಕಾರಣವಾಗಿ ಡಿಎನ್ ಎ ಗೆ ಹಾನಿ ಉಂಟಾಗುತ್ತಿತ್ತು.
ಸಮಗ್ರ ವೀರ್ಯಾಣು ವಿಂದ ಆರೋಗ್ಯಕರ ಮಗು ಹಾಗೂ ದೀರ್ಘಾಕಾಲಿಕ ಅರೋಗ್ಯ ಇರುತ್ತದೆ. ಪ್ರೌಢ ವೀರ್ಯ ಡಿಎನ್ಎ ದುರಸ್ತಿಗೆ ಮೂಲ ಆಧಾರ, ಹೀಗಾಗಿ ಉತ್ತಮ ಆರೋಗ್ಯ ಶೈಲಿಯಿಂದಾ ವೀರ್ಯದ ಗುಣಮಟ್ಟ ಕಾಪಾಡಿಕೊಳ್ಳುವುದು ಉತ್ತಮ ಎಂದು ಅಧ್ಯಯನ ತಿಳಿಸಿದೆ,
ಯೋಗಾಭ್ಯಾಸ ಅಳವಡಿಸಿಕೊಳ್ಳುವುದರಿಂದ ಡಿಎನ್ ಎ ವಿಘಟನೆಯಾಗುವುದನ್ನು ತಪ್ಪಿಸಬಹುದು, ಜೊತೆಗೆ ಸ್ವಾಭಾವಿಕ ಗರ್ಭಪಾತವನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದೆ.
SCROLL FOR NEXT