ಸಾಂದರ್ಭಿಕ ಚಿತ್ರ 
ಜೀವನಶೈಲಿ

ಸಾಮಾಜಿಕ ಮಾಧ್ಯಮಗಳು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೇ?

ವಿಶ್ವ ಆರೋಗ್ಯ ಸಂಘಟನೆ ವರದಿ ಪ್ರಕಾರ ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ...

ವಿಶ್ವ ಆರೋಗ್ಯ ಸಂಘಟನೆ ವರದಿ ಪ್ರಕಾರ ವಿಶ್ವದಲ್ಲಿ ಸುಮಾರು 300 ಮಿಲಿಯನ್ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಮನುಷ್ಯನ ಅಶಕ್ತತೆಗೆ ಖಿನ್ನತೆ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಸೋಷಿಯಲ್ ಮೀಡಿಯಾ ಎನ್ನುತ್ತದೆ ವಿಶ್ವ ಆರೋಗ್ಯ ಸಂಘಟನೆ ವರದಿ.

ಇಂದು ಬಹುತೇಕ ಮಂದಿ ಫೇಸ್ ಬುಕ್, ಟ್ವಿಟ್ಟರ್ ನಂತರ ಸಾಮಾಜಿಕ ಮಾಧ್ಯಮಗಳನ್ನು ತಮ್ಮ ಆಲೋಚನೆ, ಅಭಿಪ್ರಾಯಗಳನ್ನು, ಖುಷಿ, ನೋವುಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದಾರೆ. ವ್ಯಕ್ತಿಯ ಚಿಂತನೆ, ಮನಸ್ಥಿತಿ, ಸಂವಹನ, ಚಟುವಟಿಕೆಗಳು, ಮತ್ತು ಸಾಮಾಜಿಕತೆಗೆ ಸಂಬಂಧಪಟ್ಟ ವರ್ತನೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಭಾಷೆ ಮತ್ತು ಭಾವನೆಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ಇದರಿಂದ ಅಪರಾಧಿ ಪ್ರಜ್ಞೆ, ಅಸಹಾಯಕತೆ, ಆತ್ಮ ದ್ವೇಷ, ತಾವು ಏನಕ್ಕೂ ಉಪಯೋಗವಿಲ್ಲ ಎಂಬಿತ್ಯಾದಿ ಭಾವನೆಗಳು ಉಂಟಾಗಿ ಅದು ಖಿನ್ನತೆಯನ್ನುಂಟುಮಾಡುತ್ತದೆ. ದಿನಂಪ್ರತಿ ಸೋಷಿಯಲ್ ಮೀಡಿಯಾವನ್ನು ಬಳಸುವವರಲ್ಲಿ ಇಂತಹ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ.

ನೀವು ಮನೆಯಲ್ಲಿ ಒಬ್ಬರೇ ಕುಳಿತು ಏಕತಾನತೆಯನ್ನು ಅನುಭವಿಸುತ್ತಿರುವಾಗ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ನಿಮ್ಮ ಸ್ನೇಹಿತರು ಹೊರಗಡೆ ಎಂಜಾಯ್ ಮಾಡುತ್ತಿರುವುದು ನೋಡಿದರೆ ನಿಮ್ಮಲ್ಲಿ ಋಣಾತ್ಮಕ ಭಾವ ಮೂಡಬಹುದು. ಇದು ನಿಧಾನವಾಗಿ ಖಿನ್ನತೆಗೆ ದಾರಿ ಮಾಡಿ ಕೊಡುತ್ತದೆ ಎಂದು ಅಮೆರಿಕಾದ ಮಾನಸಿಕ ಆರೋಗ್ಯ ರಾಷ್ಟ್ರೀಯ ಸಂಸ್ಥೆ ಹೇಳುತ್ತದೆ. ಅದು ನಡೆಸಿರುವ ಅಧ್ಯಯನ ಪ್ರಕಾರ ಸೋಷಿಯಲ್ ಮೀಡಿಯಾ ಮತ್ತು ಖಿನ್ನತೆ ಮಧ್ಯೆ ಬಹಳ ಹತ್ತಿರದ ಸಂಬಂಧವಿದೆ ಎಂದು ಹೇಳುತ್ತದೆ.

ಯುವಜನತೆ ಪ್ರತಿದಿನ ಸೋಷಿಯಲ್ ಮೀಡಿಯಾವನ್ನು ಬಳಸುವ ಮಟ್ಟ ಮತ್ತು ಪ್ರತಿ ವಾರ ಬಳಸುವ ಅವಧಿಗೆ ಅನುಗುಣವಾಗಿ ಖಿನ್ನತೆ ಮಟ್ಟ ಹೆಚ್ಚಾಗುತ್ತಾ ಹೋಗುತ್ತದೆ. ಇನ್ನು ಈಗಾಗಲೇ ಖಿನ್ನತೆಯಿಂದ ಬಳಲುತ್ತಿರುವವರು ವ್ಯಕ್ತಿಗಳ ಜೊತೆ ಸಂವಹನ ನಡೆಸುವ ಬದಲು ಸಾಮಾಜಿಕ ಮಾಧ್ಯಮಗಳಲ್ಲಿಯೇ ದಿನದ ಬಹುತೇಕ ಸಮಯ ಮುಳುಗಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಏನಾದರೊಂದು ಸ್ಟೇಟಸ್ ಹಾಕಿದರೆ ಅದಕ್ಕೆ ಲೈಕ್ಸ್, ಕಮೆಂಟ್ ಗಳು ಹೆಚ್ಚಾಗಿ ಬರುತ್ತದೆ ಎಂದು ಖುಷಿಪಡುವವರು ಕೂಡ ಇರುತ್ತಾರೆ.

ಇನ್ನು ಕೆಲವರು ಖಿನ್ನತೆ ಮತ್ತು ಸಾಮಾಜಿಕ ಕಾತರತೆಯಿಂದ ಬಳಲುತ್ತಿರುವವರಿಗೆ ಸೋಷಿಯಲ್ ಮೀಡಿಯಾ ಸಹಾಯ ಮಾಡುವ ಉದಾಹರಣೆಗಳು ಕೂಡ ಇವೆ, ಅದು ವ್ಯಕ್ತಿ ಸೋಷಿಯಲ್ ಮೀಡಿಯಾವನ್ನು ಹೇಗೆ ಬಳಸುತ್ತಾನೆ ಎಂಬುದನ್ನು ಆಧರಿಸಿಕೊಂಡು ಇರುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಸಂತಸದ ಕ್ಷಣಗಳನ್ನು ಮತ್ತು ವಿಚಾರಗಳನ್ನು ಹಂಚಿಕೊಂಡವರ ಜೀವನವೆಲ್ಲವೂ ಖುಷಿಯಾಗಿರುತ್ತದೆ ಎಂದು ಅರ್ಥವಲ್ಲ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

ಹೀಗಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರು ದ್ವೇಷ, ಅಸೂಯೆ, ಅಸಮರ್ಪಕತೆ, ಖಿನ್ನತೆ ಮತ್ತು ಸಾಮಾಜಿಕ ಹೋಲಿಕೆಗಳನ್ನು ಸಮಾನವಾಗಿ ಬಳಸುವುದನ್ನು ಕಲಿಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

'ನರಕಾಸುರ' ಮೋದಿಯನ್ನು ಕೊಲ್ಲಬೇಕು: ಜನರ ಎದುರೇ DMK ನಾಯಕನಿಂದ ಕೊಲೆ ಬೆದರಿಕೆ; ಚಪ್ಪಾಳೆ ತಟ್ಟಿದ ಮಹಿಳೆಯರು; Video

ರೈಲಿನಲ್ಲಿ ಯುವಕನೋರ್ವ ನನ್ನ ಕುತ್ತಿಗೆ, ಬೆನ್ನು, ಖಾಸಗಿ ಭಾಗ ಮುಟ್ಟಿದ್ದ, ತಿರುಗಿ ನೋಡುವಷ್ಟರಲ್ಲಿ..: ಕರಾಳ ಘಟನೆ ತೆರದಿಟ್ಟ ನಟಿ Girija Oak

"ಉಪಾಸನಾ ಕೊನಿಡೆಲಾ ಮಾತೆಲ್ಲಾ ಕೇಳ್ಬೇಡಿ; 20 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ಕೊಳಿ": Zoho ಸಂಸ್ಥಾಪಕನ ಮಾತು ಕೇಳಿ ಓಹೋ ಎಂದ ಜನ!

'ಕೆಂಪು ಕೋಟೆಯಿಂದ ಕಾಶ್ಮೀರದ ಕಾಡುಗಳವರೆಗೂ ನುಗ್ಗಿ ಭಾರತವನ್ನು ಹೊಡೆದಿದ್ದೇವೆ; ಈವರೆಗೂ ಶವ ಎಣಿಕೆ ಮಾಡೋದಕ್ಕೆ ಆಗ್ತಿಲ್ಲ': ಪಾಕಿಸ್ತಾನ ಉದ್ಧಟತನ

SCROLL FOR NEXT