ಜೀವನಶೈಲಿ

ಪ್ರಣಯ ಸಂಗಾತಿಯ ಬಗ್ಗೆಯೇ ಯೋಚಿಸುತ್ತಿದ್ದರೆ ರಕ್ತದೊತ್ತಡ ನಿಯಂತ್ರಣದಲ್ಲಿ!

Srinivas Rao BV
ರಕ್ತದೊತ್ತಡ ಹೆಚ್ಚಿದೆಯೇ? ಚಿಂತಿಸಬೇಡಿ, ಮನಸ್ಸಿನಲ್ಲಿ ರೋಮ್ಯಾಂಟಿಕ್ ಸಂಗಾತಿಯನ್ನು ನೆನೆಸಿಕೊಳ್ಳಿ, ಹೃದಯ ಬಡಿತ ಕಡಿಮೆಯಾಗದಿದ್ದರೂ ರಕ್ತದೊತ್ತಡ  ಕಡಿಮೆಯಾಗುವುದು ಮಾತ್ರ ಶತಃಸಿದ್ಧ! 
ಹೀಗಂತ  ಸೈಕೋಫಿಸಿಯಾಲಜಿ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ವರದಿ ಹೇಳುತ್ತಿದೆ.  ಒತ್ತಡಕ್ಕೆ ಶರೀರ ವಿಜ್ಞಾನದ ಪ್ರತಿಕ್ರಿಯೆ ನೀಡುವುದನ್ನು ನಿರ್ವಹಣೆ ಮಾಡುವುದರ ಕುರಿತು ಅಮೆರಿಕಾದ ಯುನಿವರ್ಸಿಟಿ ಆಫ್ ಅರಿಜೋನಾದಲ್ಲಿ ಸಂಶೋಧನೆ ನಡೆಸಲಾಗಿದೆ. ಈ ಸಂಶೋಧನೆಯಲ್ಲಿ ರಕ್ತದೊತ್ತಡ ಹೆಚ್ಚಿದಾಗ ರೋಮ್ಯಾಂಟಿಕ್ ಸಂಗಾತಿಯನ್ನು ನೆನೆದರೆ ಸಾಕು ಒತ್ತಡ ಕಡಿಮೆಯಾಗಿ, ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ ಎಂಬುದುನ್ನು ಕಂಡುಕೊಳ್ಳಲಾಗಿದೆ. 
ಇದು ಸಾಬೀತಾಗಿದ್ದಾದರೂ ಹೇಗೆ ಎನ್ನುತ್ತೀರಾ? ಅದಕ್ಕೆ ಇಲ್ಲಿದೆ ಉತ್ತರ:  ಸುಮಾರು 102 ಜನರನ್ನು ಸಂಶೋಧನೆಯಲ್ಲಿ ತೊಡಗಿಸಲಾಗಿತ್ತು, ಇಷ್ಟೂ ಜನರನ್ನು ಮೂರು ಪ್ರತ್ಯೇಕ ತಂಡಗಳನ್ನಾಗಿ  ವಿಭಾಗಿಸಿ, , ಮೂರು ಇಂಚ್ ಗಳಷ್ಟು ಇರುವ 3.3-4.4 ಡಿಗ್ರಿ ಸೆಲ್ಸಿಯಸ್ ಕೊರೆಯುವ ನೀರಿನಲ್ಲಿ ಕಾಲನ್ನು ಇರಿಸಲು ಸಂಶೋಧನೆಯಲ್ಲಿ ತೊಡಗಿದ್ದವರಿಗೆ ಸೂಚಿಸಲಾಗಿತ್ತು, ಈ ಟಾಸ್ಕ್ ನ ಮುನ್ನ ಹಾಗೂ ಟಾಸ್ಕ್  ವೇಳೆಯಲ್ಲಿ ಸ್ಪರ್ಧಿಗಳ ರಕ್ತದೊತ್ತಡ, ಹಾರ್ಟ್ ರೇಟ್,  ಹಾಗೂ ಹಾರ್ಟ್ ರೇಟ್ ಬದಲಾವಣೆಗಳನ್ನು ದಾಖಲಿಸಿಕೊಳ್ಳಲಾಯಿತು.  ರೊಮ್ಯಾಂಟಿಕ್ ಸಂಗಾತಿಯನ್ನು ಹೊಂದಿರುವವರಿಗೆ ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಈ ಪೈಕಿ ರೊಮ್ಯಾಂಟಿಕ್ ಸಂಗಾತಿಗಳನ್ನು ನೆನೆಯುವುದೂ ಸಹ ಒಂದಾಗಿತ್ತು. ಅಚ್ಚರಿಯ ರೀತಿಯಲ್ಲಿ ಯಾರೆಲ್ಲಾ ತಮ್ಮ ರೊಮ್ಯಾಂಟಿಕ್ ಸಂಗಾತಿಯನ್ನು ನೆನೆಪಿಸಿಕೊಂಡಿದ್ದರೋ ಅವರಿಗೆಲ್ಲಾ, ಬೇರೆ ಆಯ್ಕೆಗಳನ್ನು ನೀಡಿದ್ದವರಿಗಿಂತಲೂ ರಕ್ತದೊತ್ತಡ ಕಡಿಮೆ ಇದ್ದದ್ದು ಬೆಳಕಿಗೆ ಬಂದಿದೆ. 
SCROLL FOR NEXT