ಸಂಗ್ರಹ ಚಿತ್ರ 
ಜೀವನಶೈಲಿ

ಕೊರೋನಾ ವೈರಸ್: ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪ್ರಾಮುಖ್ಯತೆ ಏನು? 

ಕೊರೋನಾ ವೈರಸ್ ತಲೆ ನೋವು ಶುರುವಾದಾಗಿನಿಂದಲೂ ಎಲ್ಲೆಲ್ಲೂ ಸ್ವಚ್ಛತೆಯದ್ದೇ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಕೈಗಳ ಸ್ವಚ್ಛತೆ ಬಗ್ಗೆ ಪ್ರತೀಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. 

ಕೊರೋನಾ ವೈರಸ್ ತಲೆ ನೋವು ಶುರುವಾದಾಗಿನಿಂದಲೂ ಎಲ್ಲೆಲ್ಲೂ ಸ್ವಚ್ಛತೆಯದ್ದೇ ಮಾತುಗಳು ಕೇಳಿ ಬರುತ್ತಿವೆ. ಅದರಲ್ಲೂ ಕೈಗಳ ಸ್ವಚ್ಛತೆ ಬಗ್ಗೆ ಪ್ರತೀಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ. 

ಚೀನಾ ಮೂಲದ ಮಾರಣಾಂತಿಕ ಕೊರೋನಾ ವೈರಸ್ ಏಷ್ಯಾದ ಬಹುತೇಕ ದೇಶಗಳು ಸೇರಿದಂತೆ ಹಲವಾರು ಗೇಶಗಳಿಗೆ ಹರಡಿದೆ. ವೈರಸ್ ನಿಂದ ವಿಶ್ವದಾದ್ಯಂತ ಈಗಾಗಲೇ 20,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 4 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಕೊರೋನಾ ವೈರಸ್ ಎಂದ ಕೂಡಲೇ ಜನರು ಬೆಚ್ಚಿ ಬೀಳುವಂತಹ ಪರಿಸ್ಥಿತಿ ಎದುರಾಗುತ್ತಿದೆ.

ಕೊರೋನಾ ವೈರಸ್ ನಿಂದ ದೂರ ಇರಬೇಕೆಂದರೆ, ಸ್ವಚ್ಛತೆ ಕಾಪಾಡಬೇಕು. ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದ ದನಿಗಳು ಹೆಚ್ಚಾಗುತ್ತಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಜನರು ಸೇರಿದಂತೆ ಸೆಲೆಬ್ರಿಟಿಗಳು ಕೈಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬುದರ ಕುರಿತು ವಿಡಿಯೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ.  

ಕೊರೋನಾ ವೈರಸ್ ನಿಂದ ದೂರ ಇರಲು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಕೈಗಳಲ್ಲಿ ಅಂಟುವ ವೈರಸ್ ಕಣ್ಣು, ಬಾಯಿ ಹಾಗೂ ಮೂಗಿನ ಮೂಲಕ ಸುಲಭವಾಗಿ ಮನುಷ್ಯನ ದೇಹ ಸೇರಲಿದೆ. ಸಾಮಾನ್ಯವಾಗಿ ಮನುಷ್ಯನು ಕೈಗಳು ಈ ಅಂಗಾಂಗಳನ್ನು ಮುಟ್ಟಿಕೊಳ್ಳುವುದು ಹೆಚ್ಚು. ಹೀಗಾಗಿ ವೈರಸ್ ಮನುಷ್ಯನ ದೇಹ ಸುಲಭವಾಗಿ ಸೇರಿಕೊಳ್ಳುತ್ತದೆ. ಹೀಗಾಗಿ ಎಲ್ಲೆಲ್ಲೂ ಕೈಗಳ ಸ್ವಚ್ಛತೆ ಕಾಪಾಡುವಂತೆ ಕೂಗುಗಳು ಕೇಳಿ ಬರತೊಡಗಿದೆ. ಕೈಗಳನ್ನು ಯಾವ ರೀತಿ ತೊಳೆದುಕೊಳ್ಳಬೇಕೆಂಬುದರ ಕುರಿತಂತೆ 20 ಸೆಕೆಂಡ್ ಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದು, ಅದನ್ನು ಸಾಕಷ್ಟು ಮಂದಿ ಕೂಡ ಅನುಸರಿಸಲು ಆರಂಭಿಸಿದ್ದಾರೆ. 

ರೋಗ ನಿಯಂತ್ರಮ ಮತ್ತ ತಡೆಗಟ್ಟುವಿಕೆ ಕೇಂದ್ರವು ಕಣ್ಣು, ಮೂಗು, ಬಾಯಿಯನ್ನು ಪದೇ ಪದೇ ಮುಟ್ಟಿಕೊಳ್ಳಬಾರದೆಂದು ಸಲಹೆ ನೀಡಿದೆ. ಹಾಗೆಯೇ ಪದೇ ಪದೇ ಬಳಕೆ ಮಾಡುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸೂಚಿಸಿದೆ. ತಜ್ಞರ ಪ್ರಕಾರ ಕೆಮ್ಮು, ಸೀನಿನ ಮುಖಾಂತರವೂ ವೈರಾಣು ಹರಡುವ ಸಾಧ್ಯತೆ ಇದೆ. ಹಾಗಾಗಿ ಯಾರಿಗಾದರೂ ಶೀತ, ಜ್ವರದ ಲಕ್ಷಣಗಳು ಇದ್ದರೆ, ಅದರಿಂದ ಕನಿಷ್ಟ 6 ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಅಷ್ಟು ದೂರ ಸಾಧ್ಯವಾಗದಿದ್ದರೆ ಸ್ವಲ್ಪವಾದರೂ ಅಂತರ ಇರುವಂತೆ ನೋಡಿಕೊಳ್ಳಬೇಕು. 

ಸ್ವಚ್ಛ ನೀರಿನಲ್ಲಿ ಸೋಪು ಬಳಸಿ ಕನಿಷ್ಟ 20 ಸೆಕೆಂಡ್ ಕೈಗಳನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವಾಗ ಉಗುರು, ಉಗುರಿನ ಸಂದಿ, ಕೈಬೆರಳ ಸಂದಿಗಳನ್ನು ಸ್ವಚ್ಛ ಮಾಡಿ. ಬಳಿಕ ಸ್ವಚ್ಛವಾದ ಟವೆಲ್ ನಲ್ಲಿ ಒರೆಸಿಕೊಳ್ಳಿ ಅತವಾ ಗಾಳಿಯಲ್ಲಿಯೇ ಒಣಗಲು ಬಿಡಿ. ಮದ್ಯ ಬೆರೆಸಿದ ಸ್ಯಾನಿಟೈಸರ್ ಬಳಸಿ 20 ಸೆಕೆಂಡ್ ಕೈಗಳನ್ನು ವಾಷ್ ಮಾಡುವುದು ಕೂಡ ಉಪಯೋಗಕಾರಿ. ಆದರೆ, ನೀವು ಬಳಸುವ ಜೆಲ ಕನಿಷಅಟ ಶೇ.60-95ರಷ್ಟು ಆಲ್ಕೋಹಾಲ್ ಅಂಶ ಒಳಗೊಂಡಿರಬೇಕು. ಪದೇ ಪದೇ ಹೀಗೆ ಮಾಡುವುದರಿಂದ ಸೋಂಕನ್ನು ತಡೆಗಟ್ಟಬಹುದು. 

ಕೊರೋನಾ ವೈರಸ್ ಕೆಮ್ಮು ಹಾಗೂ ಸೀನಿನಿಂದ ಕೂಡ ಇತರರಿಗೆ ಹರಡುತ್ತದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ಟಿಶ್ಯೂ ಬಳಸಿ. ಹಠಾತ್ ಆರೋಗ್ಯ ಕೆಟ್ಟಿರೆ ಹೆದರದಿರಿ. ಎಲ್ಲಾ ಜ್ವರವೂ ಕೊರೋನಾ ಲಕ್ಷಣವಲ್ಲ. ಹಾಗೆಯೇ ಸರಿಯಾಗಿ ಬೇಯಿಸಿದ ಆಹಾರವನ್ನು ಸೇವನೆ ಮಾಡಿ.

ಆಲ್ಕೋಹಾಲ್ ಅತ್ಯುತ್ತಮವಾದ ಕೊರೋನಾ ಸೋಂಕು ನಿವಾರಕ. ಹಾಗಾಗಿ ಆಲ್ಕೋಹಾಲ್ ಬಳಸಿ ಮನೆಯನ್ನು ಆಗಾಗ ಸ್ವಚ್ಛ ಮಾಡುತ್ತಿರಿ. ಮೂಗು, ಕೈಗಳನ್ನು ಒರೆಸಿಟ್ಟ ಟಿಶ್ಯೂ ಪೇಪರ್ ಗಳನ್ನು ಸ್ಟಾಕ್ ಮಕಾಡಿಟ್ಟುಕೊಳ್ಳದೇ ಕೂಡಲ ಮನೆಯಿಂದ ಎಸೆದುಬಿಡಿ. ಹಾಗೆಯೇ ಫೋನ್, ಟ್ಯಾಬ್ಲೆಟ್ ಅಥವಾ ಪದೇ ಪದೇ ಬಳಕೆ ಮಾಡುವ/ಮುಟ್ಟುವ ವಸ್ತುಗಳನ್ನು ಸ್ವಚ್ಛವಾಗಿಡಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT