ಜೀವನಶೈಲಿ

ಇತ್ತೀಚಿನ ತಾಯಂದಿರಿಗೆ ಸ್ತನ್ಯಪಾನ ಸವಾಲು ಏಕೆ?: ವೃತ್ತಿ ಬದುಕು, ವಯಸ್ಸು, ಒತ್ತಡವೇ ಮುಖ್ಯ ಕಾರಣ!

Ramyashree GN

ಬೆಂಗಳೂರು: ಮಗುವಿನ ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸ್ತನ್ಯಪಾನವು ನಿರ್ಣಾಯಕವಾಗಿದೆ. ತಾಯಿಯಾಗುವ ಅನುಭವವು ಕೂಡ ಅಗಾಧವಾಗಿದೆ. ಆದ್ದರಿಂದ, ಶಿಶುಗಳಿಗೆ ಸ್ಥಿರವಾದ ಸ್ತನ್ಯಪಾನ ಮಾಡಿಸುವ ಅಗತ್ಯವನ್ನು ಎತ್ತಿ ತೋರಿಸಲೆಂದು ಪ್ರತಿ ವರ್ಷ ವಿಶ್ವ ನರ್ಸಿಂಗ್ ಸಪ್ತಾಹವನ್ನು ಆಚರಿಸಲಾಗುತ್ತದೆ. ವಿಶ್ವ ಸ್ತನ್ಯಪಾನ ಸಪ್ತಾಹವನ್ನು ವಿಶ್ವದಾದ್ಯಂತ ಆಗಸ್ಟ್ 1 ರಿಂದ ಆಗಸ್ಟ್ 7 ರವರೆಗೆ ಸ್ಮರಿಸಲಾಗುತ್ತದೆ.

ವೃತ್ತಿಜೀವನ, ತಡವಾಗಿ ಆಗುವ ಮದುವೆಗಳು, ಹೆಚ್ಚಿರುವ ತಾಯ್ತನದ ವಯಸ್ಸು, ವೃತ್ತಿಪರ ಬದುಕಿನ ಒತ್ತಡ, ಜೀವನಶೈಲಿಯ ಬದಲಾವಣೆಗಳು ಮತ್ತು ಇತರ ಕಾರಣಗಳಿಂದಾಗಿ ಎದೆಹಾಲಿನ ಸ್ರವಿಸುವಿಕೆ ಕಡಿಮೆಯಾಗುತ್ತದೆ ಮತ್ತು ಇದು ಶಿಶುಗಳಿಗೆ ಉತ್ತಮ ಪೋಷಣೆಯ ಮೂಲದಿಂದ ವಂಚಿತವಾಗುವಂತೆ ಮಾಡುತ್ತದೆ.

ಇದೇ ವೇಳೆ, ವೈದ್ಯರು ಮತ್ತು ತಜ್ಞರು ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಡಿಮೆ ಹಾಲಿನ ಉತ್ಪಾದನೆಯಿಂದಾಗಿ ಸುಮಾರು ಶೇ 15-20 ರಷ್ಟು ಹೊಸ ತಾಯಂದಿರು ಹಾಲುಣಿಸಲು ಕಷ್ಟಪಡುತ್ತಾರೆ ಮತ್ತು 40-50 ಪ್ರತಿಶತದಷ್ಟು ತಾಯಂದಿರು ಹುಟ್ಟಿದ ಎರಡು ಅಥವಾ ಮೂರು ತಿಂಗಳೊಳಗೆ ವೃತ್ತಿಪರ ಕಾರಣಗಳಿಂದ ಹಾಲುಣಿಸುವಿಕೆಯನ್ನು ನಿಲ್ಲಿಸಲು ಮುಂದಾಗುತ್ತಾರೆ ಎಂದು ಅವರು ಹೇಳುತ್ತಾರೆ.

ಮದರ್‌ಹುಡ್ ಆಸ್ಪತ್ರೆಯ ನಿಯೋನಾಟಾಲಜಿಸ್ಟ್ ಮತ್ತು ಮಕ್ಕಳ ವೈದ್ಯ ಡಾ.ಸಂತೋಷ್ ಕುಮಾರ್ ಮಾತನಾಡಿ, 'ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಅವಧಿಪೂರ್ವ ಜನನ, ಜೆನೆಟಿಕ್ ಮಾಡ್ಯುಲೇಷನ್, ಪರಿಸರ, ವೃತ್ತಿಪರ ಮತ್ತು ಕೌಟುಂಬಿಕ ಜೀವನದ ಸಮತೋಲನ ಗೊಳಿಸುವಲ್ಲಿನ ಒತ್ತಡ, ಆಹಾರ ಪದ್ಧತಿ, ಪೋಷಣೆ, ನಿದ್ರೆಯ ಚಕ್ರ ಮತ್ತು ಹೊಸ ರೋಗಗಳಿಗೆ ತೆರೆದುಕೊಳ್ಳುವ ಮುಂತಾದ ಪರಿಸ್ಥಿತಿಗಳು ಹೊಸ ತಾಯಂದಿರ ಎದೆ ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ' ಎನ್ನುತ್ತಾರೆ.

ತಜ್ಞರ ಪ್ರಕಾರ, ಮಹಿಳೆಯರು ಈ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಹಾಲುಣಿಸುವಿಕೆಯನ್ನು ಸುಧಾರಿಸಲು ವೈದ್ಯರ ಸಲಹೆಯನ್ನು ಪಡೆಯಬೇಕು. ಅಲ್ಲದೆ, ಅವರು ಶಿಶು ಸೂತ್ರ ಅಥವಾ ದಾನಿಗಳ ಹಾಲನ್ನು ಪಾಶ್ಚೀಕರಿಸಿದ ಹಾಲಿನ ಬ್ಯಾಂಕ್‌ನಿಂದ ಆರಿಸಿಕೊಳ್ಳಬಹುದು. ಮುಖ್ಯವಾಗಿ ಅನಾರೋಗ್ಯಕರ ಶಿಶುಗಳಿಗೆ ಇದನ್ನು ಬಳಸಬಹುದು.

ಆದಾಗ್ಯೂ, ಅಂತಹ ಹಾಲು ನೆಕ್ರೋಟೈಸಿಂಗ್ ಎಂಟ್ರೊಕೊಲೈಟಿಸ್‌ಗೆ ಕಾರಣವಾಗಬಹುದು ಮತ್ತು ಬಾಟಲ್ ಫೀಡಿಂಗ್ ಮಾಡುವುದರಿಂದ ಅತಿಸಾರ, ಕಿವಿ ಸೋಂಕು, ನ್ಯುಮೋನಿಯಾ ಮತ್ತು ಸೆಪ್ಸಿಸ್‌ನಂತಹ ಸೋಂಕುಗಳ ಅಪಾಯ ಉಂಟಾಗಬಹುದು. ಇದು ಸ್ಥೂಲಕಾಯ, ಮೆಟಾಬಾಲಿಕ್ ಸಿಂಡ್ರೋಮ್ ಮತ್ತು ಕಳಪೆ ಬುದ್ಧಿವಂತಿಕೆಯ ಕಾರ್ಯಕ್ಷಮತೆಯಂತಹ ದೀರ್ಘಕಾಲೀನ ಸಮಸ್ಯೆಗಳ ಅಪಾಯವನ್ನು ಶಿಶುಗಳಿಗೆ ತಂದೊಡ್ಡಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಸ್ತ್ರೀರೋಗ ತಜ್ಞೆ ಮತ್ತು ಪ್ರಸೂತಿ ತಜ್ಞೆ ಡಾ. ಸ್ಮೃತಿ ಡಿ ನಾಯಕ್ ಪ್ರಕಾರ, 'ಮಗುವಿನ ಉತ್ತಮ ಬೆಳವಣಿಗೆಗೆ ಎದೆ ಹಾಲು ಅತ್ಯುತ್ತಮ ಪೋಷಕಾಂಶವಾಗಿದೆ. ಇದು ಮಕ್ಕಳನ್ನು ಅಲರ್ಜಿ, ಸೋಂಕುಗಳು, ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ. ಹೀಗಾಗಿ ತಾಯಂದಿರು ಆರು ತಿಂಗಳಿನಿಂದ ಕನಿಷ್ಠ ಒಂದು ವರ್ಷದವರೆಗೆ ಎದೆ ಹಾಲುಣಿಸುವುದನ್ನು ಮಾಡಬೇಕು' ಎನ್ನುತ್ತಾರೆ.

SCROLL FOR NEXT