ಸಂಗ್ರಹ ಚಿತ್ರ 
ಜೀವನಶೈಲಿ

ರಾತ್ರಿ ಹೊತ್ತು ಮಗು ಮಲಗುತ್ತಿಲ್ಲವೇ? ಏನು ಮಾಡಬೇಕು? ಇಲ್ಲಿದೆ ಕೆಲ ಸಲಹೆಗಳು...

ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಏಕೆಂದರೆ, ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ.

ನಿದ್ರೆ ಎಂಬುದು ಮನುಷ್ಯನ ಆರೋಗ್ಯಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಏಕೆಂದರೆ, ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. 

ಮನುಷ್ಯನಿಗೆ ಸರಾಸರಿ ಎಂದರೂ 7-8 ಗಂಟೆಗಳ ನಿದ್ರೆ ಬೇಕೇಬೇಕು. ಸಾಮಾನ್ಯ ಮಕ್ಕಳು ಹೆಚ್ಚು ನಿದ್ರೆ ಮಾಡುತ್ತಾರೆ. ಮಕ್ಕಳು ಹೆಚ್ಚು ನಿದ್ರೆ ಮಾಡಿದಷ್ಟೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. ಶಿಶುವಿನ ಆರೋಗ್ಯವು ಅದು ನಿದ್ರಿಸುವ ಅವಧಿಯಿಂದ ನಿರ್ಧಾರವಾಗುತ್ತದೆ ಎಂದೂ ಕೂಡ ಹೇಳಲಾಗುತ್ತದೆ. 

ಸಣ್ಣ ಮಕ್ಕಳು ಯಾವ ಹಂತದಲ್ಲಿ ಎಷ್ಟು ಗಂಟೆಗಳ ನಿದ್ರೆಯ ಅವಶ್ಯಕತೆ ಇದೆ? 

  • 1-4 ವಾರಗಳ ಮಗು: ನವಜಾತ ಶಿಶುಗಳು ಸಾಮಾನ್ಯವಾಗಿ ದಿನಕ್ಕೆ 15-18 ಗಂಟೆಗಳ ಕಾಲ ನಿದ್ರೆ ಮಾಡುತ್ತವೆ. ಆದರೆ. ಈ ನಿದ್ರೆ ನಿರಂತರವಾಗಿರುವುದಿಲ್ಲ. ಆಗಾಗೆ ನಿದ್ರೆಯಿಂದ ಏಳುವುದು ಆಟವಾಡಿ ಮತ್ತೆ ಮಲಗುತ್ತಿರುತ್ತವೆ. 
  • 1-4 ತಿಂಗಳ ಮಗು: ಮಕ್ಕಳಿಗೆ ಬೆಳೆಯಲು, ಕಲಿಯಲು ಮತ್ತು ಫಿಟ್ ಆಗಿರಲು ಹೆಚ್ಚಿನ ನಿದ್ರೆಯು ಅವಶ್ಯಕವಾಗಿದ್ದು, ಈ ಶಿಶುಗಳು ದಿನಕ್ಕೆ 14-15 ಗಂಟೆ ನಿದ್ರೆ ಮಾಡುತ್ತವೆ. 
  • 4-12 ತಿಂಗಳ ಮಗು: ಈ ಶಿಶುಗಳು 14-15 ಗಂಟೆಗಳ ನಿದ್ರೆ ಮಾಡುತ್ತವೆ. ಆದರೆ ಕೆಲವು ಕೆಲ ಮಕ್ಕಳು 11 ತಿಂಗಳ ತನಕ ಕೇವಲ 12 ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತವೆ.
  • 1-3 ವರ್ಷದ ಮಗು: ಈ ಮಕ್ಕಳು ದಿನಕ್ಕೆ 12-14 ಗಂಟೆಗಳು ನಿದ್ರೆ ಮಾಡುತ್ತವೆ. 
  • 3-6 ವರ್ಷದ ಮಕ್ಕಳು: ಈ ಮಕ್ಕಳು ದಿನಕ್ಕೆ 12 ಗಂಟೆಗಳ ನಿದ್ರೆ ಮಾಡುತ್ತವೆ. ಸಾಮಾನ್ಯವಾಗಿ ಈ ವಯಸ್ಸಿನ ಮಕ್ಕಳು ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆ ಮಧ್ಯೆ ನಿದ್ರೆಗೆ ಜಾರುವರು ಮತ್ತು ಬೆಳಗ್ಗೆ 6ರಿಂದ 8 ಗಂಟೆ ಮಧ್ಯೆ ಎದ್ದೇಳುವರು.
  • 7-12 ವರ್ಷದ ಮಕ್ಕಳು: ಈ ಮಕ್ಕಳು 10-11 ಗಂಟೆಗಳು ನಿದ್ರೆ ಮಾಡುವರು. ಈ ವಯಸ್ಸಿನಲ್ಲಿ ಮಕ್ಕಳು ಹೆಚ್ಚು ಆಟವಾಡುವುದು, ಬೇರೆ ಮಕ್ಕಳೊಂದಿಗೆ ಬೆರೆಯುವುದರಿಂದ ನಿದ್ರೆ ಮಾಡುವುದು ವಿಳಂಬವಾಗುತ್ತದೆ. 
  • 12-18 ವರ್ಷದ ಮಕ್ಕಳು: ದಿನಕ್ಕೆ 8-9 ಗಂಟೆಗಳ ಕಾಲ ನಿದ್ರೆ ಮಾಡುತ್ತಾರೆ. ಹದಿಹರೆಯದಲ್ಲಿ ನಿದ್ರೆಯು ದೇಹಕ್ಕೆ ಅತೀ ಅನಿವಾರ್ಯ ಕೂಡ. ಹದಿಹರೆಯದಲ್ಲಿ ಕೆಲವರಿಗೆ ಹೆಚ್ಚಿನ ಗಂಟೆಗಳ ನಿದ್ರೆಯು ಬೇಕಾಗುತ್ತದೆ. ಆದರೆ, ಹೆಚ್ಚಿನ ಹದಿಹರೆಯದ ಮಕ್ಕಳು ಈ ಅವಧಿಯಲ್ಲಿ ತಮ್ಮ ಗೆಳೆಯ ಗೆಳೆತಿಯರ ಬಳಗದಲ್ಲಿ ಇರುವ ಕಾರಣದಿಂದಾಗಿ ಉತ್ತಮ ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದ ನಿದ್ರೆಯು ಸಿಗದು.

ಸಾಮಾನ್ಯವಾಗಿ ನವಜಾತ ಶಿಶುಗಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡುವುದು ಕಡಿಮೆಯಾಗಿರುತ್ತದೆ. ಇದರಿಂದ ಪೋಷಕರು ಸಮಸ್ಯೆ ಎದುರಿಸಬೇಕಾಗುತ್ತದೆ. ಮಕ್ಕಳು ರಾತ್ರಿ ಸಮಯದಲ್ಲಿ ನಿದ್ರೆ ಮಾಡದಿರಲು ಕೆಲವು ಕಾರಣಗಳಿವೆ. ಅವುಗಳನ್ನು ಸರಿಪಡಿಸಿದರೆ ಮಕ್ಕಳು ಸುಖವಾಗಿ ನಿದ್ರೆ ಮಾಡುತ್ತಾರೆ. 

ಹಸಿವು
ಎದೆಹಾಲು ಬೇಡಿಕೆಯ ಮೇರೆಗೆ ಅಥವಾ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಆಹಾರವನ್ನು ನೀಡದಿದ್ದರೆ, ಮಗುವಿಗೆ ರಾತ್ರಿಯಲ್ಲಿ ಹಸಿವು ಉಂಟಾಗುತ್ತದೆ. 

ಬದಲಾದ ಮಲಗುವ ಸಮಯ
ಮಗುವಿಗೆ ನಿದ್ರೆಯ ದಿನಚರಿಯಲ್ಲಿ ಆಗುವ ಬದಲಾವಣೆಗಳು ಅವುಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತವೆ. ಇದರಿಂದ ಮಗುವಿಗೆ ಉತ್ತಮ ನಿದ್ರೆಯನ್ನು ಆನಂದಿಸಲು ಕಷ್ಟವಾಗುತ್ತದೆ. 

ಹೆಚ್ಚಿದ ಒತ್ತಡ
ಮಕ್ಕಳು ತುಂಬಾ ದಣಿದಿರುವಾಗ ಉತ್ತಮವಾಗಿ ನಿದ್ರಿಸುವುದಿಲ್ಲ. ಅತಿಯಾದ ಆಯಾಸಗೊಂಡಾಗ ಕಡಿಮೆ ನಿದ್ರೆ ಮಾಡುತ್ತಾರೆ ಹಾಗೂ ಆಗಾಗ ಎಚ್ಚರಗೊಳ್ಳುತ್ತಿರುತ್ತಾರೆ. 

ಅನಾರೋಗ್ಯ
ಹೊಟ್ಟೆ ನೋವು, ಗ್ಯಾಸ್, ಆ್ಯಸಿಡ್ ರಿಫ್ಲಕ್ಸ್, ನೆಗಡಿ ಮತ್ತು ಕೆಮ್ಮು, ಹಲ್ಲಿನ ಸಮಸ್ಯೆಯಿಂದ ಮಕ್ಕಳಲ್ಲಿ ನಿದ್ರೆಯ ಸಮಸ್ಯೆಗಳು ಉಂಟಾಗುತ್ತವೆ.

ಪೋಷಕರು ಹತ್ತಿರವಿರುವಂತೆ ಬಯಸುತ್ತಾರೆ
ಮಗು ಎಚ್ಚರವಾದಾಗ ಪೋಷಕರನ್ನು ಹುಡುಕುತ್ತದೆ. ಸಿಗದೇ ಇದ್ದಾಗ ಭಯಪಡುತ್ತದೆ. 

ಅಹಿತಕರ ಪರಿಸರ
ಶಿಶುಗಳು ಮಲಗಿದ ಸ್ಥಳಕ್ಕಿಂತ ವಿಭಿನ್ನ ವಾತಾವರಣದಲ್ಲಿ ಎಚ್ಚರಗೊಂಡರೆ, ಗೊಂದಲಕ್ಕೊಳಗಾಗುತ್ತಾರೆ ಮತ್ತು ಭಯಭೀತರಾಗುತ್ತಾರೆ. 

ಹಗಲಿನಲ್ಲಿ ನಿದ್ರೆ ಮಾಡದಿರುವುದು
ನಿಮ್ಮ ಮಗು ಹಗಲಿನಲ್ಲಿ ನಿದ್ರೆಯಿಲ್ಲದೆ, ಹೆಚ್ಚು ದಣಿದಿದ್ದರೆ, ಮುಂಗೋಪಿಯಾಗುತ್ತದೆ. ನಂತರ ರಾತ್ರಿ ಸಮಯದಲ್ಲಿ ನಿದ್ರೆ ಮಾಡದೆ ಸಮಸ್ಯೆ ಎದುರಿಸುತ್ತದೆ. 

ಹೊಸ ಕೌಶಲ್ಯಗಳು
ತೆವಳುವ, ಒದೆಯುವ, ಉರುಳುವ, ಕುಳಿತುಕೊಳ್ಳುವ ಅಥವಾ ನಿಂತಿರುವ ಕಲೆಯನ್ನು ಕರಗತ ಮಾಡಿಕೊಂಡಿದ್ದರೆ ರಾತ್ರಿಯಲ್ಲೂ ಅದನ್ನು ಮಾಡಲು ಪ್ರಯತ್ನಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT