LIVE

Live: ಗುಜರಾತ್ ನಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ನಿಕಟ ಸ್ಪರ್ಧೆ

Sumana Upadhyaya

ಗಾಂಧಿನಗರ: 1995 ರಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ (BJP), ರಾಜ್ಯದಲ್ಲಿ ಸತತ ಏಳನೇ ಅವಧಿಗೆ ಅಧಿಕಾರದ ಗುರಿ ಹೊಂದುವ ಹುಮ್ಮಸ್ಸಿನಲ್ಲಿದೆ. 

ಚುನಾವಣಾ ಪೂರ್ವ ಸಮೀಕ್ಷೆಗಳು ಗುಜರಾತ್‌ನಲ್ಲಿ ಪಿಎಂ ಮೋದಿಯವರ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದವು. ಬಿಜೆಪಿ ಕಳೆದ ಬಾರಿಯ 117 ರಿಂದ 151 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದ್ದವು. ಕಾಂಗ್ರೆಸ್‌ನ ಸಂಖ್ಯೆ 51ರಿಂದ 16ಕ್ಕೆ ಕುಸಿಯುತ್ತದೆ ಎಂದು ಭವಿಷ್ಯ ನುಡಿದಿದ್ದವು. ಹೊಸ ಸೇರ್ಪಡೆಯಾದ ಆಮ್ ಆದ್ಮಿ ಪಕ್ಷದ ಪ್ರಚಾರವು ಪಕ್ಷಕ್ಕೆ ಭರವಸೆ ಹುಟ್ಟುಹಾಕಿತ್ತು. ಅದಕ್ಕೆ ಎರಡರಿಂದ 13 ಸ್ಥಾನಗಳು ಬರಬಹುದು ಎಂದು ನಿರೀಕ್ಷಿಸಲಾಗಿತ್ತು.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ಕಾಣುತ್ತಿದೆ. 1985 ರ ನಂತರ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದ ನಿದರ್ಶನವಿಲ್ಲ. ಆದರೆ ಆಡಳಿತಾರೂಢ ಬಿಜೆಪಿಯು ಪಿಎಂ ಮೋದಿಯ ಪ್ರಚಾರದಿಂದ ಭರವಸೆ ಹೊಂದಿತ್ತು. 

ಕೇಸರಿ ಪಕ್ಷವು ಈಗಾಗಲೇ ಉತ್ತರ ಪ್ರದೇಶ, ಗೋವಾ, ಅಸ್ಸಾಂ ಮತ್ತು ಉತ್ತರಾಖಂಡದಲ್ಲಿ ಅಧಿಕಾರಕ್ಕೆ ಮರಳಿದೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ತವರು ರಾಜ್ಯವಾದ ಹಿಮಾಚಲ ಪ್ರದೇಶ ಕೂಡ ಬಿಜೆಪಿಗೆ ಬರಬಹುದು ಎಂದು ಆಶಿಸುತ್ತಿದೆ. 

ಕಾಂಗ್ರೆಸ್‌ಗೆ ಬಹಳಷ್ಟು ಅಪಾಯವಿದೆ, ಪಕ್ಷದ ಪುನರುಜ್ಜೀವನದ ಭರವಸೆಯು ಹಿಮಾಚಲ ಪ್ರದೇಶದಿಂದ ಪ್ರಾರಂಭವಾಗಬೇಕು ಎಂದು ಆಂತರಿಕ ಮೂಲಗಳೇ ಹೇಳುತ್ತಿವೆ. ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್ ಪ್ರಸ್ತುತ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮಾತ್ರ ಅಧಿಕಾರದಲ್ಲಿದೆ, ಇವೆರಡೂ 2023 ರಲ್ಲಿ ಚುನಾವಣೆ ಕಾಣಲಿವೆ.

SCROLL FOR NEXT