ಹಿನ್ನೋಟ 2014

ಪಂಜಾಬ್ ಸರ್ಕಾರಕ್ಕೆ ತಲೆನೋವಾದ ಆಶುತೋಶ್ ಮಹಾರಾಜ್ ಪ್ರಕರಣ

Srinivasamurthy VN

ದೇಶದಲ್ಲಿನ ಮೌಢ್ಯತೆಯ ಪರಮಾವಧಿಗೆ ಹಿಡಿದ ಕೈಗನ್ನಡಿ ಎಂದರೆ ಪಂಜಾಬ್‌ನ ಬಾಬಾ ಆಶುತೋಷ್ ಮಹಾರಾಜ್ ಪ್ರಕರಣ. ಜೀವಂತ ಸಮಾಧಿಗೆ ತೆರಳಿ 11 ತಿಂಗಳ ಹಿಂದೆಯೇ ನಿಧನರಾಗಿರುವ ಬಾಬಾ ಆಶುತೋಷ್ ಮಹಾರಾಜ್ ಅವರು ಬದುಕಿದ್ದಾರೆ. ಸಮಾಧಿ ಸ್ಥಿತಿಯಿಂದ ಎದ್ದು ಬರುತ್ತಾರೆ ಎಂದು ನಂಬಿರುವ ಸಾವಿರಾರು ಭಕ್ತರು ಅವರ ಸಮಾಧಿಯನ್ನು ಸೈನಿಕರಂತೆ ಕಾಯುತ್ತಿದ್ದಾರೆ. ಇತ್ತ ಮೃತರಾಗಿರುವ ತಮ್ಮ ತಂದೆಯ ಶವವನ್ನು ಅಂತಿಮ ಸಂಸ್ಕಾರ ಮಾಡಲು ಅನುವು ಮಾಡಿಕೊಡಿ ಎಂದು ಅವರ ಮಗ ದಿಲೀಪ್ ಕುಮಾರ್ ಝಾ ಪಂಜಾಬ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 15 ದಿನದಲ್ಲಿ ಬಾಬಾ ಆಶುತೋಷ್ ಮಹಾರಾಜ್ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕೆ ಒಳಪಡಿಸಬೇಕು ಎಂದು ಹೇಳಿತ್ತು. ಈ ವಿಚಾರದಲ್ಲಿ ನಿಜವಾಗಿ ಬಲಿಪಶುಗಾಳಿಗಿದ್ದು ಮಾತ್ರ ಪಂಜಾಬ್ ಪೊಲೀಸರು. ಏಕೆಂದರೆ ಅತ್ತ ಹೈಕೋರ್ಟ್ 15 ದಿನದಲ್ಲಿ ಶವ ಸಂಸ್ಕಾರ ಮಾಡಿ ಎಂದು ಆದೇಶಿಸಿದೆ. ಇತ್ತ ಜಲಂಧರ್‌ನಲ್ಲಿರುವ ಬಾಬಾ ಆಶ್ರಮದಲ್ಲಿ ಸಾವಿರಾರು ಭಕ್ತರು ಶಸ್ತ್ರ ಸಜ್ಜಿತರಾಗಿ ಯಾವುದೇ ಕಾರಣಕ್ಕೂ ಬಾಬಾ ಅವರ ದೇಹವನ್ನು ಮುಟ್ಟಲು ಬಿಡುವುದಿಲ್ಲ ಎಂದು ಕಾವಲು ಕಾಯುತ್ತಿದ್ದಾರೆ.

ಹೀಗಾಗಿ ಪಂಜಾಬ್ ಪೊಲೀಸರು ಯಾವುದೇ ಕ್ರಮ ಕೈಗೊಂಡರೂ ಅವರಿಗೇ ತಿರುಗುಬಾಣವಾಗುವ ಸಾಧ್ಯತೆ ಇದೆ. ಬಾಬಾ ರಾಂಪಾಲ್ ಪ್ರಕರಣವನ್ನು ಮರೆಯದ ಪಂಜಾಬ್ ಪೊಲೀಸರು ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದು, ನಿಧಾನವಾಗಿ ಭಕ್ತರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಒಟ್ಟಾರೆ ಬಾಬಾ ಆಶುತೋಶ್ ಅಂತಿಮ ಸಂಸ್ಕಾರ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದು ನೋಡಬೇಕಿದೆ.

SCROLL FOR NEXT