ಹಿನ್ನೋಟ 2014

ಜಿಎಸ್‌ಎಲ್‌ವಿ ಯಶಸ್ವಿ ಉಡಾವಣೆ

Srinivasamurthy VN

ಜನವರಿ 5ರಂದು ಜಿಎಸ್‌ಎಲ್‌ವಿ ಉಪಗ್ರಹ ವಾಹಕವನ್ನು ಉಡಾವಣೆ ಮಾಡುವ ಮೂಲಕ ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿತು. ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಇಂಜಿನ್ ಹೊಂದಿದ್ದ ಜಿಎಸ್‌ಎಲ್‌ವಿ ಡಿ5 ಉಪಗ್ರಹ ವಾಹಕವನ್ನು ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗಿತ್ತು.

ಸುಮಾರು 220 ಕೋಟಿ ರು. ಹಣವನ್ನು ವೆಚ್ಚಮಾಡಿ ಈ ವಾಹಕವನ್ನು ನಿರ್ಮಾಣ ಮಾಡಲಾಗಿತ್ತು. 49.13 ಎತ್ತರ ಮತ್ತು 414.75 ತೂಕವಿದ್ದ ಈ ವಾಹಕವು ಜಿಸ್ಯಾಟ್ ಸಂವಹನ ಉಪಗ್ರಹವನ್ನು ಹೊತ್ತು ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ಉಡಾವಣೆಗೊಂಡ 17.13 ನಿಮಿಷದ ಅಂತರದಲ್ಲಿ 1, 982 ಕೆಜಿ ತೂಕದ ಜಿಸ್ಯಾಟ್ 14 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. ಬಾಹ್ಯಾಕಾಶ ವಿಭಾಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಜಿಎಸ್‌ಎಲ್‌ವಿ ಡಿ5 ಉಪಗ್ರಹ ವಾಹಕವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಈ ವ್ಯವಸ್ಥೆ ಹೊಂದಿರುವ ಅಮೆರಿಕ, ರಷ್ಯಾ, ಜಪಾನ್, ಚೀನಾ ಮತ್ತು ಫ್ರಾನ್ಸ್ ದೇಶಗಳ ಪಟ್ಟಿಗೆ ಭಾರತ ಸೇರ್ಪಡೆಯಾಯಿತು.

SCROLL FOR NEXT