ಹಿನ್ನೋಟ 2014

ಮಲಾಲಾ ಮತ್ತು ಸತ್ಯಾರ್ಥಿಗೆ ನೊಬೆಲ್

Srinivasamurthy VN

ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೊರಾಟಗಾರ್ತಿ ಮಲಾಲಾ ಯೂಸುಫ್ ಝೈ ಮತ್ತು ಭಾರತದ ಮಕ್ಕಳ ಹಕ್ಕು ಹೊರಾಟಗಾರ ಕೈಲಾಶ್ ಸತ್ಯಾರ್ಥಿ ಅವರಿಗೆ 2014ರ ಜಂಟಿ ನೊಬೆಲ್ ಪ್ರಶಸ್ತಿ ಒಲಿದು ಬಂದಿದೆ. ತಾಲಿಬಾನಿ ಮೂಲಭೂತವಾದಿಗಳ ಹಿಡಿತದಲ್ಲಿರುವ ವಜೀರಿಸ್ತಾನದಲ್ಲಿನ ಹೆಣ್ಣುಮಕ್ಕಳ ಧಾರುಣ ಪರಿಸ್ಥಿತಿ ಕುರಿತು ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಹೋರಾಟ ನಡೆಸಿ, ಅದೇ ತಾಲಿಬಾನಿಗಳಿಂದ ಗುಂಡೇಟು ತಿಂದ ಮಲಾಲಾ ಯೂಸುಫ್ ಝೈ ಅವರ ಸಾಧನೆ ಮತ್ತು ಭಾರತದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಎಲೆಮರೆಕಾಯಿಯಂತೆ ತಮ್ಮ ಸೇವೆ ಸಲ್ಲಿಸುತ್ತಿದ್ದ ಕೈಲಾಶ್ ಸತ್ಯಾರ್ಥಿ ಅವರ ಸಾಧನೆಯನ್ನು ಗುರುತಿಸಿದ ನೊಬೆಲ್ ಪ್ರಶಸ್ತಿ ಸಮಿತಿಯು 2014ರ ನೊಬೆಲ್ ಶಾಂತಿ ಪಾರಿತೋಷಕವನ್ನು ಜಂಟಿಯಾಗಿ ಭಾರತ ಮತ್ತು ಪಾಕಿಸ್ತಾನಕ್ಕೆ ನೀಡಿದೆ.

ಇದೇ ಡಿಸೆಂಬರ್ 10ರಂದು ನಾರ್ವೆಯ ಓಸ್ಲೋದಲ್ಲಿ ನಡೆದ ನೊಬೆಲ್ ಶಾಂತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಂಟಿ ನೊಬೆಲ್ ಶಾಂತಿ ಪಾರಿತೋಷಕವನ್ನು ಮಲಾಲಾ ಯೂಸುಫ್ ಝೈ ಮತ್ತು ಕೈಲಾಶ್ ಸತ್ಯಾರ್ಥಿ ಅವರಿಗೆ ಪ್ರಧಾನ ಮಾಡಲಾಯಿತು. 6.6 ಕೋಟಿ ಮೌಲ್ಯದ ಪ್ರಶಸ್ತಿಯನ್ನು ಇಬ್ಬರು ಗಣ್ಯರಿಗೆ ಸಮನಾಗಿ ಹಂಚಿಕೆ ಮಾಡಲಾಯಿತು.

SCROLL FOR NEXT