ಸಾಂದರ್ಭಿಕ ಚಿತ್ರ 
ಹಿನ್ನೋಟ 2022

ಹಿನ್ನೋಟ 2022: ಶೈಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳು, ಕರ್ನಾಟಕಕ್ಕೆ ವಿವಾದದ ವರ್ಷ

ಕಳೆದ ಎರಡು ವರ್ಷಗಳು ಕೋವಿಡ್ ಸೋಂಕಿನ ಕಾರಣದಿಂದ ಸರಿಯಾಗಿ ಶಾಲಾ-ಕಾಲೇಜುಗಳು ಸಾಗದೆ ಆನ್ ಲೈನ್ ಮೂಲಕ ಶಿಕ್ಷಣ ನಡೆದಿದ್ದವು. ಈ ಮಧ್ಯೆ  ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜಾರಿಗೆ ತಯಾರಿ ನಡೆಸುತ್ತಿದ್ದರೆ, 2022ರಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳು ಆರಂಭವಾದವು. 

ಬೆಂಗಳೂರು: ಕಳೆದ ಎರಡು ವರ್ಷಗಳು ಕೋವಿಡ್ ಸೋಂಕಿನ ಕಾರಣದಿಂದ ಸರಿಯಾಗಿ ಶಾಲಾ-ಕಾಲೇಜುಗಳು ಸಾಗದೆ ಆನ್ ಲೈನ್ ಮೂಲಕ ಶಿಕ್ಷಣ ನಡೆದಿದ್ದವು. ಈ ಮಧ್ಯೆ  ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜಾರಿಗೆ ತಯಾರಿ ನಡೆಸುತ್ತಿದ್ದರೆ, 2022ರಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳು ಆರಂಭವಾದವು. 

2022ರಲ್ಲಿ ಶೈಕ್ಷಣಿಕ ವಲಯದಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಕಂಡಿತು, ಅದರಲ್ಲೂ ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲಾಗಿದೆ. ಹಲವಾರು ಉಪಕ್ರಮಗಳು ವಿದ್ಯಾರ್ಥಿಗಳು ಮತ್ತು ಇತರ ಸಂಬಂಧಪಟ್ಟವರಿಗೆ ಮಾಹಿತಿಯನ್ನು ಸುಲಭಗೊಳಿಸಲು ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ತರಲಾಯಿತು. ಶೈಕ್ಷಣಿಕ ವಲಯದಲ್ಲಿ ಹಲವು ವಿವಾದಗಳು ಕೂಡ ಕಂಡಿವೆ. 

ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದರ ಸುತ್ತ ವಿವಾದಗಳು ಹತ್ತಿಕೊಂಡವು. ಮಧ್ಯಾಹ್ನದ ಊಟದ ಸಮಯದಲ್ಲಿ ಮಕ್ಕಳಿಗೆ ಏನನ್ನು ನೀಡಬೇಕು ಎಂಬ ಬಗ್ಗೆ ಒಂದಷ್ಟು ಚರ್ಚೆಗಳು ನಡೆದವು. ಹಠಾತ್ ಪಠ್ಯಕ್ರಮ ಬದಲಾವಣೆಗಳು, ಶಿಕ್ಷಣ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸುವುದು, ಮೂಲ ಮೂಲಸೌಕರ್ಯ ಹೋರಾಟಗಳು ಸೇರಿದಂತೆ, ವರ್ಷವಿಡೀ ಶಿಕ್ಷಣ ವಲಯವನ್ನು ಹಲವು ಸಮಸ್ಯೆಗಳು ಬಾಧಿಸಿವೆ. 

ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಎಂದು ಕರೆಯಲಾಗುತ್ತಿದ್ದ ಇಲಾಖೆಯನ್ನು ಈ ವರ್ಷದ ಆರಂಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಬದಲಾಯಿಸಲಾಯಿತು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮನ್ನು ಶಾಲಾ ಶಿಕ್ಷಣ ಸಚಿವ ಎಂದೇ ಸಂಬೋಧಿಸತೊಡಗಿದರು. 

56 ವರ್ಷ ಹಳೆಯ ಕರ್ನಾಟಕ ರಾಜ್ಯ ಶಿಕ್ಷಣ ಪರೀಕ್ಷಾ ಮಂಡಳಿ (KSEEB)ಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಂದು ಮರುನಾಮಕರಣ ಮಾಡಲಾಯಿತು, KSEAB ಅಡಿಯಲ್ಲಿ, ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ (SSLC) ಬೋರ್ಡ್ ಪರೀಕ್ಷೆಗಳು ಮತ್ತು ಪ್ರಿ-ಯೂನಿವರ್ಸಿಟಿ ಬೋರ್ಡ್ ಪರೀಕ್ಷೆಗಳನ್ನು ಒಂದೇ ಪ್ರಾಧಿಕಾರದ ಅಡಿಯಲ್ಲಿ ಸಂಯೋಜಿಸಲು ಇಲಾಖೆಯು ಪ್ರಸ್ತಾಪಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಉನ್ನತ ಶಿಕ್ಷಣದ ಸ್ಥಿತಿಗತಿ ಕರ್ನಾಟಕದಲ್ಲಿ ಆಧುಕೀರಣಕ್ಕೆ ಒತ್ತು ನೀಡುತ್ತಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಭರವಸೆ ನೀಡುವ ಯುನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್ (UUCMS) ಗೆ ಬದಲಾಯಿಸುವುದು ಜಾರಿಗೆ ತಂದ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಅದರ ಅನುಷ್ಠಾನದ ನಂತರ, ಸಂಸ್ಥೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಾದ ಆದೇಶಗಳನ್ನು ನೀಡಲಾಯಿತು. 

ಹಿಜಾಬ್ ವಿವಾದ: 2022ರ ಆರಂಭದಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಜಾಬ್ ವಿವಾದ ಭಾರೀ ಸದ್ದು ಮಾಡಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಸುದ್ದಿಯಾಯಿತು. ಹಿಜಾಬ್ ವಿವಾದವನ್ನು ಕೇಸರಿಕರಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಠ್ಯಪುಸ್ತಕಗಳಲ್ಲಿ ಅಧ್ಯಾಯಗಳನ್ನು ಸೇರಿಸುವುದು ಅಥವಾ ಬಿಟ್ಟುಬಿಡುವುದು, ಹಲವಾರು ಪಠ್ಯಕ್ರಮದ ಬದಲಾವಣೆಗಳು, ಮಧ್ಯಾಹ್ನದ ಊಟದಲ್ಲಿ ಮಕ್ಕಳಿಗೆ ಏನು ನೀಡಬೇಕೆಂಬುದರ ಬದಲಾವಣೆಗಳು ಮತ್ತು ಸರ್ಕಾರಿ ತರಗತಿ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುವ ಕ್ರಮಕ್ಕೆ ಮುಂದಾಗಿದ್ದು ಸಹ ವಿವಾದಕ್ಕೆ ಎಡೆಮಾಡಿಕೊಟ್ಟಿತು. 

NEP 2020ಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಸಮಾಜದ ಹಲವು ವರ್ಗದ ಜನರ ವಿರೋಧ ಕೂಡ ಇದೆ. ಶಿಕ್ಷಣ ಕ್ಷೇತ್ರದ ಎಲ್ಲಾ ಹಂತಗಳಲ್ಲಿ ಅಳವಡಿಸಲಾದ ಹಲವಾರು ಬದಲಾವಣೆಗಳು ಸಮಸ್ಯೆಯನ್ನು ಹೊಂದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಆದರೂ ರಾಜ್ಯದ ಶಿಕ್ಷಣ ಕ್ಷೇತ್ರವು ಆಧುನೀಕರಣದ ಪ್ರಯತ್ನಗಳಿಗಾಗಿ ಮತ್ತು ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಸಂಪರ್ಕವನ್ನು ನಿರ್ಮಿಸುವುದಕ್ಕಾಗಿ ಪ್ರಶಂಸೆಗೆ ಪಾತ್ರವಾಗಿದೆ. ರಾಜ್ಯವು ಬೋಧನೆ ಮತ್ತು ಸಂಶೋಧನೆಗೆ ಪ್ರಾಮುಖ್ಯತೆಯನ್ನು ನೀಡಲು ಪ್ರಯತ್ನಿಸಿದೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹೆಚ್ಚು ಸುಲಭವಾಗಿಸಲು, ಪರೀಕ್ಷೆಯ ಸಮಯದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಬರೆಯಲು ಅವಕಾಶ ನೀಡುವುದು ಮತ್ತು ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸುವುದು ಮುಂತಾದ ಉಪಕ್ರಮಗಳ ಮೂಲಕ ಪ್ರಯತ್ನಿಸಿದೆ.

ಒಟ್ಟಾರೆಯಾಗಿ, 2022 ಶಿಕ್ಷಣ ಕ್ಷೇತ್ರಕ್ಕೆ ಬದಲಾವಣೆಗಳ ದೊಡ್ಡ ವರ್ಷವಾಗಿದೆ. ಈ ಬದಲಾವಣೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲಾಗಿಲ್ಲ ಎಂದು ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಹೇಳಿಕೊಂಡರೆ, ಹೊಸ ಪ್ರಯತ್ನಗಳಲ್ಲಿ ಆರಂಭದಲ್ಲಿ ಸಮಸ್ಯೆಗಳು, ಸವಾಲುಗಳು, ಕುಂದುಕೊರತೆಗಳು ಇರುವುದು ಸಹಜ ಎಂದು ಅಧಿಕಾರಿಗಳು ಮತ್ತು ಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

KSCA ಅಧ್ಯಕ್ಷರಾಗಿ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ!

SCROLL FOR NEXT