ಸುಪ್ರೀಂ ಕೋರ್ಟ್ 
ಹಿನ್ನೋಟ 2022

ಹಿನ್ನೋಟ 2022: ಹಲವು ಐತಿಹಾಸಿಕ ಕ್ಷಣಗಳು, ತೀರ್ಪುಗಳಿಗೆ ಸಾಕ್ಷಿಯಾದ ಸುಪ್ರೀಂ ಕೋರ್ಟ್

ತನ್ನ 72 ವರ್ಷಗಳ ಸುದೀರ್ಘ ಇತಿಹಾಸದಲ್ಲಿ 2022 ರಲ್ಲಿ ಸುಪ್ರೀಂ ಕೋರ್ಟ್ ಅನೇಕ "ಮೊದಲ" ಮತ್ತು "ಐತಿಹಾಸಿಕ, ಅಭೂತಪೂರ್ವ ನಡೆಗಳಿಗೆ" ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವರ್ಷ ಮೂವರು ಮುಖ್ಯ ನ್ಯಾಯಾಧೀಶರನ್ನು ಕಾಣಬೇಕಾಯಿತು.

ನವದೆಹಲಿ: ತನ್ನ 72 ವರ್ಷಗಳ ಸುದೀರ್ಘ ಇತಿಹಾಸದಲ್ಲಿ 2022 ರಲ್ಲಿ ಸುಪ್ರೀಂ ಕೋರ್ಟ್ ಅನೇಕ "ಮೊದಲ" ಮತ್ತು "ಐತಿಹಾಸಿಕ, ಅಭೂತಪೂರ್ವ ನಡೆಗಳಿಗೆ" ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವರ್ಷ ಮೂವರು ಮುಖ್ಯ ನ್ಯಾಯಾಧೀಶರನ್ನು ಕಾಣಬೇಕಾಯಿತು. ಮಾತ್ರವಲ್ಲದೆ ವಕೀಲರು, ಪತ್ರಕರ್ತರು ಮತ್ತು ಸಾಮಾನ್ಯ ಜನರು ಹೊಸ ಬದಲಾವಣೆಯನ್ನು ನ್ಯಾಯಾಂಗ ವ್ಯವಸ್ಥೆಯಲ್ಲಿ ಕಂಡಿದ್ದಾರೆ. ನ್ಯಾಯ ವಿತರಣಾ ವ್ಯವಸ್ಥೆಯನ್ನು ತ್ವರಿತಗೊಳಿಸಲು ಮತ್ತು ಪಾರದರ್ಶಕವಾಗಿಸಲು ಹೊಸ ಬದಲಾವಣೆಗಳನ್ನು ತರಲಾಯಿತು. 

2022 ರಲ್ಲಿ ಸುಪ್ರೀಂ ಕೋರ್ಟ್ ವಸಾಹತುಶಾಹಿ ದೇಶದ್ರೋಹ ಕಾನೂನನ್ನು ತಡೆಹಿಡಿಯಿತು, ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆಯ ಕಟ್ಟುನಿಟ್ಟಾದ ನಿಬಂಧನೆಗಳನ್ನು ಎತ್ತಿಹಿಡಿದಿದೆ, 3:2 ರ ಬಹುಮತದಿಂದ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ಕೋಟಾವನ್ನು ತಂದಿದೆ.

2002ರ ಗೋಧ್ರಾ ಹತ್ಯಾಕಾಂಡ ಕೇಸಿನಲ್ಲಿ ಪ್ರಧಾನ ಮಂತ್ರಿಗೆ ನೀಡಲಾದ ಕ್ಲೀನ್ ಚಿಟ್ ನ್ನು ಎತ್ತಿಹಿಡಿದಿದೆ. ಕರ್ನಾಟಕ ಹೈಕೋರ್ಟ್‌ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿಯುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಲ್ಲಿ ವಿಭಜಿತ ತೀರ್ಪು ನೀಡಿತು. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಆಡಳಿತ ಮತ್ತು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ನಡುವಿನ ಬಿರುಕಿನ ಹಾದಿಯ ತೀರ್ಪಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. 

ಸಿಜೆಐ ಎನ್‌ವಿ ರಮಣ ಅವರ ಅಧಿಕಾರಾವಧಿಯಲ್ಲಿ, ರಾಷ್ಟ್ರೀಯ ಮತ್ತು ಸಾಂವಿಧಾನಿಕ ಮಹತ್ವದ ಅನೇಕ ವಿಷಯಗಳು ತೀರ್ಪು ಕಾಣಲಿಲ್ಲ. ಆದರೆ ನ್ಯಾಯಮೂರ್ತಿ ಯು ಯು ಲಲಿತ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡ ಮೇಲೆ, ದೇಶದ ಸರ್ವೋಚ್ಚ ನ್ಯಾಯಾಲಯದ ಕಾರಿಡಾರ್‌ಗಳು ಭರವಸೆಯಿಂದ ತುಂಬಿದ್ದವು. ಮುಖ್ಯ ನ್ಯಾಯಮೂರ್ತಿ ಲಲಿತ್ ಅವರು ತಮ್ಮ 74 ದಿನಗಳ ಅಲ್ಪಾವಧಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ 2019 ರ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಪಟ್ಟಿ ಮಾಡುವ ಮೂಲಕ ಅಳಿಸಲಾಗದ ಗುರುತು ಹಾಕಿ ಹೋಗಿದ್ದಾರೆ. 

2016 ರ ಕೇಂದ್ರದ ನೋಟು ಅಮಾನ್ಯೀಕರಣ ನೀತಿ ಮತ್ತು ನ್ಯಾಯಾಂಗದ ಧಕ್ಕೆ ತರುವ ಅನಾಮಧೇಯ ಚುನಾವಣಾ ಬಾಂಡ್‌ಗಳ ಯೋಜನೆಗೆ ಸಂಬಂಧಿಸಿದ ಮನವಿಗಳು. ಆರು ಸಾಂವಿಧಾನಿಕ ಪೀಠಗಳನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ ಎಂಟು ಲಕ್ಷ ವೀಕ್ಷಕರು ಸಂವಿಧಾನ ಪೀಠಗಳ ಮುಂದೆ ನಡೆಯುತ್ತಿರುವ ಕಲಾಪಗಳನ್ನು ವೀಕ್ಷಿಸಲು ಮೊಟ್ಟಮೊದಲ ನೇರ ಅಧಿವೇಶನಕ್ಕೆ ಸಾಕ್ಷಿಯಾಯಿತು. ಸುದೀರ್ಘ ಸೇವೆ ಸಲ್ಲಿಸಿದ ಸಿಜೆಐ ನ್ಯಾಯಮೂರ್ತಿ ವೈ ವಿ ಚಂದ್ರಚೂಡ್ ಅವರ ಪುತ್ರ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಸುಪ್ರೀಂ ಕೋರ್ಟ್ ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ  ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ, ಭಾರತೀಯ ನ್ಯಾಯಾಂಗವು ತನ್ನ ಏಕೈಕ ತಂದೆ-ಮಗ ಜೋಡಿಯನ್ನು ಸಿಜೆಐ ಸ್ಥಾನಕ್ಕೆ ತಲುಪಿದ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.

ಮಾನವ ಹಕ್ಕುಗಳ ರಕ್ಷಕನಾಗಿ, ಸುಪ್ರೀಂ ಕೋರ್ಟ್ ಮಹಿಳೆಯರ ಪರವಾಗಿ ಹಲವಾರು ನಿರ್ಧಾರಗಳನ್ನು ಅಂಗೀಕರಿಸಿದೆ, ಅದು ಅವಿವಾಹಿತ ಮಹಿಳೆಯರು ಗರ್ಭ ಧರಿಸಿದ್ದರೆ 24 ವಾರಗಳವರೆಗೆ ಗರ್ಭಪಾತ ಮಾಡುವ ಹಕ್ಕನ್ನು ನೀಡುವುದರಿಂದ ಹಿಡಿದು ವಿವಾಹಿತ ಮಹಿಳೆಗೆ "ವೈವಾಹಿಕ ಅತ್ಯಾಚಾರ" ಎಂದು ಪರಿಗಣಿಸುವ ಮೂಲಕ ಬಲವಂತದ ಗರ್ಭಧಾರಣೆಯನ್ನು ತೆಗೆಯುವ ಅವಕಾಶ ನೀಡುತ್ತದೆ. 

ವೈಯಕ್ತಿಕ ಸ್ವಾತಂತ್ರ್ಯದ ಭರವಸೆಯಂತೆ, ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮತ್ತು ಹತ್ರಾಸ್ ಪಿತೂರಿ ಪ್ರಕರಣದಲ್ಲಿ ಪತ್ರಕರ್ತ ಸಿದ್ದಿಕ್ ಕಪ್ಪನ್‌ಗೆ ಜಾಮೀನು ನೀಡಿತು. ಭೀಮಾ ಕೋರೆಗಾಂವ್ ಆರೋಪಿ ಜಿಎನ್ ಸಾಯಿಬಾಬಾ ಅವರ ಜಾಮೀನು ವಿಶೇಷ ಅಧಿವೇಶನದಲ್ಲಿ ರದ್ದುಗೊಂಡಿದ್ದರೂ ಇತರ ಆರೋಪಿಗಳಾದ ಗೌತಮ್ ನವಲಖಾ, ಆನಂದ್ ತೇಲ್ತುಂಬ್ಡೆ ಮತ್ತು ಪಿ ವರವರ ರಾವ್ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಹಲವಾರು ಶೆಲ್ ಕಂಪನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ವಿರುದ್ಧ ಇಡಿ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸ್ವೀಕರಿಸುವ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠವು ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ನೀಡಲಾದ ವಿನಾಯಿತಿಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಲ್ಲಿ ನೋಟಿಸ್ ಜಾರಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ದೇವರ ಮೊರೆ ಹೋದ ಡಿಕೆಶಿ ಬೆಂಬಲಿಗರು: ಅಯ್ಯಪ್ಪ ಮಾಲಾಧಾರಿಗಳ ವಿಶೇಷ ಪೂಜೆ; ಗಣಪತಿ ದೇವಾಲಯಲ್ಲಿ ಈಡುಗಾಯಿ ಸೇವೆ!

SCROLL FOR NEXT