- ಲಕ್ಷ್ಮೀ ದೇವಿಗೆ ನೆಚ್ಚಿನ ಫಲ ತ್ರಿಫಲ ಅಥವಾ ತೆಂಗಿನಕಾಯಿ. ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನಿಲ್ಲಲು ತೆಂಗಿನಕಾಯಿ ಸದಾ ಮನೆಯಲ್ಲಿ ಇರಬೇಕೆಂದು ಹೇಳಲಾಗುತ್ತೆ. ಇದು ಲಕ್ಷ್ಮೀಯನ್ನು ಆಕರ್ಷಿಸುವ ಅತ್ಯಂತ ಪವಿತ್ರ ಫಲವೆಂದು ಪರಿಗಣಿಸಲ್ಪಟ್ಟಿದೆ.
- ಕವಡೆಗಳು ಸಮುದ್ರ ಜನ್ಯ ವಸ್ತುವಾಗಿದೆ. ಲಕ್ಷ್ಮೀ ದೇವಿಯು ಸಹ ಸಮುದ್ರದಲ್ಲಿ ಜನಿಸಿದ ಕಾರಣದಿಂದ ಈಕೆಗೆ ಕವಡೆ ಎಂದರೆ ಪ್ರೀತಿ. ಹೀಗಾಗೇ ಕವಡೆಗಳನ್ನು ಮನೆಯಲ್ಲಿ ಇಡುವ ಮೂಲಕ ಆಕೆಯನ್ನು ಆಕರ್ಷಿಸಬಹುದು ಎಂದು ಹೇಳಲಾಗುತ್ತೆ.
- ಲಕ್ಷ್ಮೀ ಮತ್ತು ಗಣಪತಿ ಮೂರ್ತಿಯನ್ನು ಒಟ್ಟಿಗೆ ಇಟ್ಟು ಪೂಜಿಸುವುದು ಅತ್ಯಂತ ಶುಭವಂತೆ. ಗಣಪತಿಯ ಜೊತೆಗೆ ಲಕ್ಷ್ಮೀಯನ್ನು ಪೂಜಿಸಿದರೆ ಆಕೆಗೆ ಮತ್ತಷ್ತಟು ಸಂತೋಷವಾಗುತ್ತದೆಯಂತೆ. ಅದರಲ್ಲೂ ಈ ಎರಡೂ ಮೂರ್ತಿಗಳು ಬೆಳ್ಳಿಯದ್ದಾಗಿದ್ರೆ, ಆ ಮನೆಯಲ್ಲಿ ಸಂಪತ್ತು, ಐಶ್ವರ್ಯ ಎಂದಿಗೂ ಕಡಿಮೆಯಾಗುವುದಿಲ್ಲ ಎನ್ನುವುದು ಪುರಾತನ ನಂಬಿಕೆ.
- ಶಂಖದಲ್ಲಿ ನೀರನ್ನು ತುಂಬಿ ಅದನ್ನು ದಕ್ಷಿಣಾಭಿಮುಖವಾಗಿ ಇಡುವ ಮೂಲಕ ಲಕ್ಷ್ಮೀ ದೇವಿಯನ್ನು ಮನೆಗೆ ಆಹ್ವಾನಿಸಬಹುದು.
- ಲಕ್ಷ್ಮೀ ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಹೀಗಾಗೇ ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇಡುವುದರಿಂದ ಸಾಕ್ಷಾತ್ ಲಕ್ಷ್ಮೀ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತೆ.
- ಪಾದರಸ ಮಹಾಲಕ್ಷ್ಮೀಗೆ ಅತ್ಯಂತ ಪ್ರಿಯವಾದ ವಸ್ತು. ಹೀಗಾಗಿ ಲಕ್ಷ್ಮೀ, ಗಣಪತಿಯ ಪಾದರಸದ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀ ನಮ್ಮ ಮನೇಯಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.
- ಮೋತಿ ಶಂಕವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸದಾ ಶಾಂತಿ ನೆಲೆಸಿರುತ್ತದೆ.
- ಲಕ್ಷ್ಮೀ ದೇವಿಯ ಬೆಳ್ಳಿಯ ಹೆಜ್ಜೆ ಗುರುತುಗಳನ್ನು ಮನೆಯಲ್ಲಿ ಹಣವಿಡುವ ದಿಕ್ಕಿಗೆ ಮುಖಮಾಡಿ ಇಡುವುದರಿಂದ ಸಕಲ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತೆ.
- ಶ್ರೀಯಂತ್ರಕ್ಕೆ ಸಂಪತ್ತನ್ನು ಆಕರ್ಷಿಸುವ ಅದ್ಭುತ ಶಕ್ತಿ ಇದೆ. ಹೀಗಾಗಿ ಶ್ರೀಯಂತ್ರವನ್ನು ದೇವರ ಮನೆಯಲ್ಲಿ ಇಡುವುದರಿಂದ ಮನೆ ಸಂಪದ್ಭರಿತವಾಗುತ್ತೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos