ಮುಷ್ಕರ ಕೈಬಿಡಿ, ಮಾತುಕತೆಗೆ ಬನ್ನಿ: ಪ್ರಧಾನಿ
ನವದೆಹಲಿ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಗಳು ಹಾಗೂ ಬ್ಯಾಂಕ್ ನೌಕರರು ಫೆ. 20, 21ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಇದರಿಂದ ದೇಶದ ಅರ್ಥವ್ಯವಸ್ಥೆಗೆ ಭಾರಿ ನಷ್ಟ ಹಾಗೂ ಸಾರ್ವಜನಿಕರಿಗೆ ಅನಾನುಕೂಲ ಆಗುವ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡುವಂತೆ ಪ್ರಧಾನಿ ಮನಮೋಹನ ಸಿಂಗ್ ಮನವಿ ಮಾಡಿದ್ದಾರೆ. ಸಚಿವರಾದ ಆ್ಯಂಟನಿ, ಶರದ್ ಪವಾರ್, ಚಿದಂಬರಂ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರಲ್ಲಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವಂತೆ ಪ್ರಧಾನಿ ಸೂಚಿಸಿದ್ದಾರೆ.