ಹೈದರಾಬಾದ್: ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಸಂಸದ ವೈ.ಎಸ್.ಜಗನ್ಮೋಹನ ರೆಡ್ಡಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆಂಧ್ರಪ್ರದೇಶ ಹೈಕೋರ್ಟ್ ತಿರಸ್ಕರಿಸಿದೆ. ಕಳೆದ ತಿಂಗಳು ರೆಡ್ಡಿ ಸಲ್ಲಿಸಿದ್ದ ಶಾಸನಾತ್ಮಕ ಅರ್ಜಿಯನ್ನು ಹೈಕೋರ್ಟ್ ಕಳೆದ ತಿಂಗಳ 24ರಂದು ತಿರಸ್ಕರಿಸಿತ್ತು. ಆಂಧ್ರಪ್ರದೇಶ ಸರ್ಕಾರದ ಅಸಹಕಾರ ಧೋರಣೆಯಿಂದಾಗಿ ಜಗನ್ ರೆಡ್ಡಿ ವಿರುದ್ಧದ ಪ್ರಕರಣದಲ್ಲಿ ಪ್ರಗತಿ ಸಾಧಿಸಲು ಅಸಾಧ್ಯವಾಗಿದೆ ಎಂದು ಕೋರ್ಟ್ಗೆ ಜ.22ರಂದು ಸಿಬಿಐ ಅರಿಕೆ ಮಾಡಿಕೊಂಡಿತ್ತು.