ಡೆಹ್ರಾಡೂನ್: ದೆಹಲಿ ಗ್ಯಾಂಗ್ರೇಪ್ಗೆ ಬಲಿಯಾದ ನಿರ್ಭಯಾ ಅಂಕದಲ್ಲಿ ಗೆದ್ದಿದ್ದಾಳೆ!
ಡೆಹ್ರಾಡೂನ್ನಲ್ಲಿ ಫಿಸಿಯೋಥೆರಪಿ ಓದುತ್ತಿದ್ದ ಆಕೆ ಕಡೇ ಸೆಮಿಸ್ಟರ್ನ ಪರೀಕ್ಷೆ ಬರೆದಿದ್ದಳು. ಈ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಆಕೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಇಂದು ಆಕೆ ಬದುಕಿದ್ದರೆ, ಮನೆಯಲ್ಲಿ ಎಷ್ಟು ಸಂತಸವಿರುತ್ತಿತ್ತೋ!
ಫಿಸಿಯೋಥೆರಪಿ ಅಭ್ಯಸಿಸುತ್ತಿದ್ದ ಆಕೆ ಇದರಲ್ಲಿ ಶೇ. 73 ರಷ್ಟು ಅಂಕ ಪಡೆದಿದ್ದಾಳೆ. ಈ ಮೂಲಕ ಕಾಲೇಜಿಗೇ ಕೀರ್ತಿ ತಂದಿದ್ದಾಳೆ ಎಂದು ಸಾಯಿ ಇನ್ಸ್ಟಿಟ್ಯುಟ್ನ ಡೀನ್ ಹರೀಶ್ ಅರೋರಾ ಹೇಳಿದ್ದಾರೆ. 2008ರಲ್ಲಿ ಈ ಕೋರ್ಸ್ಗೆ ಸೇರಿಕೊಂಡಿದ್ದ ಆಕೆ, ಚೆನ್ನಾಗಿ ಓದುತ್ತಿದ್ದಳು. ಕಡೇ ವರ್ಷದ ಪರೀಕ್ಷೆಯಾದ ನಂತರ ಆಕೆ ಇಂಟರ್ನ್ಶಿಪ್ಗಾಗಿ ದೆಹಲಿಗೆ ಹೋಗಿದ್ದಳು. ಅಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದಳು ಎಂದು ಅವರು ನೆನಪಿಸಿಕೊಂಡಿದ್ದಾರೆ. ಕೋರ್ಸ್ಗಾಗಿ ಆಕೆ ಕಟ್ಟಿದ್ದ ಹಣವನ್ನು ಅವರ ಮನೆಯವರಿಗೆ ವಾಪಸ್ ನೀಡುವುದಾಗಿ ಅವರು ಹೇಳಿದ್ದಾರೆ. ಸದ್ಯದಲ್ಲೇ ದೆಹಲಿಗೆ ತೆರಳಿ ಕೊಡುವುದಾಗಿ ಹರೀಶ್ ತಿಳಿಸಿದ್ದಾರೆ.