ನವದೆಹಲಿ: ವಿದ್ಯಾರ್ಥಿಗಳು ಪದವಿ ಪಡೆಯಲು ಮಾಹಿತಿ ತಂತ್ರಜ್ಞಾನ ಕಲಿಸುವ 4 ವಿದ್ಯಾಸಂಸ್ಥೆಗಳಿಗೆ ಒಂದೇ ಆಡಳಿತ ಮಂಡಳಿ ಮಾಡುವ ಬಗೆಗಿನ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಜಾರಿಗೊಳಿಸಲಾಯಿತು. ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ಸ್ ಆಫ್ ಇನ್ಫರ್ಮೇಷನ್ ಆ್ಯಂಡ್ ಟೆಕ್ನಾಲಜಿ(ಐಐಐಟಿ) ಮಸೂದೆ 2014ರನ್ನು ರಾಜ್ಯಸಭೆ ಧ್ವನಿ ಮತದ ಮೂಲಕ ಜಾರಿ ಮಾಡಿದೆ.
ಈ ಮಸೂದೆಗೆ ನ.26ರಂದು ಸಮ್ಮತಿ ಸಿಕ್ಕಿದ್ದು, 4 ವಿದ್ಯಾಸಂಸ್ಥೆಗಳಿಂದ ತೇರ್ಗಡೆಯಾಗಿ ಬರುವ ವಿದ್ಯಾರ್ಥಿಗಳಿಗೀಗ ಪದವಿಯೂ ಸಿಗಲಿದೆ. ಉತ್ಮಮ ಶಿಕ್ಷಕ ವೃಂದವನ್ನು ಆಯ್ದು ತರಲು ಸರ್ಕಾರ ಮುಂದಾಗಿದೆ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಯಾವುದೀ 4 ಐಐಐಟಿಗಳು?
ಅಲಹಾಬಾದ್, ಗ್ವಾಲಿಯರ್, ಜಬಲ್ಪುರ ಮತ್ತು ಕಾಂಚೀಪುರದಲ್ಲಿರುವ ಈ ಐಐಐಟಿಗಳಿಗೆ ಸ್ವಾಯತ್ತ ಸ್ಥಾನಮಾನ ನೀಡಲಾಗಿದೆ. 2008ರಿಂದ ತಮ್ಮ ಪದವಿಗಾಗಿ ಕಾದು ಕುಳಿತಿರುವ ಐಐಐಟಿ-ಕಾಂಚೀಪುರಂನ ವಿದ್ಯಾರ್ಥಿಗಳು ಇದೀಗ ನಿಟ್ಟುಸಿರು ಬಿಡುವಂತಾಗಿದೆ.