ಅನಿಲ್ ಕುಮಾರ್ ಸಿನ್ಹಾ ಸಿಬಿಐ ನೂತನ ನಿರ್ದೇಶಕ
ಸಿಬಿಐನ ಹೊಸ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಅವರನ್ನು ಕೇಂದ್ರ...
ನವದೆಹಲಿ: ಸಿಬಿಐನ ಹೊಸ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ರಾತ್ರಿ ಆಯ್ಕೆ ಮಾಡಿದೆ.
ಸದ್ಯ ಅವರು ಕೇಂದ್ರ ತನಿಖಾ ಸಂಸ್ಥೆಯ ವಿಶೇಷ ನಿರ್ದೇಶಕರಾಗಿದ್ದಾರೆ. 1979ರ ಬಿಹಾರ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ಅಳರು ಕೇಂದ್ರ ತನಿಖಾ ದಳದಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿ ಐಪಿಎಸ್ ಅಧಿಕಾರಿಗಳಾದ ಅನಿಲ್ಕುಮಾರ್ ಸಿನ್ಹಾ ಮತ್ತು ಶರತ್ಕುಮಾರ್ ಹೆಸರನ್ನು ಅಂತಿಮ ಪಡಿಸಿತ್ತು.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜನ ಖರ್ಗೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರೂ ಪ್ರಧಾನಿ ಮೋದಿ ನೇತೃತ್ವದ ಸಮಿತಿಯಲ್ಲಿದ್ದರು. ಸುಮಾರು 40 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಪರಿಶೀಲಿಸಲಾಗಿತ್ತು. ಅಂತಿಮವಾಗಿ ಅನಿಲ್ ಕುಮಾರ್ ಸಿನ್ಹಾ ಮತ್ತು ಹರ್ಯಾಣದ ಐಪಿಎಸ್ ಅಧಿಕಾರಿ ಶರತ್ ಕುಮಾರ್ ನಡುವೆ ಪೈಪೋಟಿ ಇತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.