ಲಾಹೋರ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಉಗ್ರ ಹಫೀಜ್ ಸಯೀದ್‌ನ ವಿಚಾರಗೋಷ್ಠಿಗೆ ಪಾಕಿಸ್ತಾನ ಸರ್ಕಾರವೇ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಲಾಹೋರ್‌ನಲ್ಲಿ ನಡೆಯಲಿರುವ ನಿಷೇಧಿತ ಜಮಾತ್ ಉದ್ ದಾವಾದ ಎರಡು ದಿನಗಳ ವಿಚಾರಗೋಷ್ಠಿಗೆ ಪಾಕಿಸ್ತಾನ ರೈಲ್ವೆಯು ಎರಡು ವಿಶೇಷ ರೈಲುಗಳನ್ನು ಓಡಿಸಲಿದೆ.
ಲಾಹೋರ್‌ನ ಮಿನಾರ್ ಐ-ಪಾಕಿಸ್ತಾನದ ಮೈದಾನದಲ್ಲಿ ಡಿ.4ರಿಂದ ಈ ವಿಚಾರಗೋಷ್ಠಿ ನಡೆಯಲಿದೆ.