ಫಿಲಿಪ್ ಹ್ಯೂಸ್ ಅಂತ್ಯಕ್ರಿಯೆ 
ದೇಶ

ಫಿಲಿಪ್ ಹ್ಯೂಸ್‌ಗೆ ಭಾವಪೂರ್ಣ ವಿದಾಯ

ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಅಂತ್ಯಕ್ರಿಯೆ ಆಸ್ಟ್ರೇಲಿಯಾದ ಮ್ಯಾಕ್‌ವಿಲ್ಲೆಯಲ್ಲಿ ನೆರವೇರಿಸಲಾಯಿತು.

ನ್ಯೂ ಸೌತ್‌ವೇಲ್ಸ್:ಕೌಂಟಿ ಕ್ರಿಕೆಟ್ ಪಂದ್ಯದ ವೇಳೆ ಬೌನ್ಸ್‌ರ್ ಎಸೆತದಿಂದ ಪೆಟ್ಟು ತಿಂದು ಮೃತಪಟ್ಟ ಆಸೀಸ್ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಅಂತ್ಯಕ್ರಿಯೆ ಆಸ್ಟ್ರೇಲಿಯಾದ ಮ್ಯಾಕ್‌ವಿಲ್ಲೆಯಲ್ಲಿ ನೆರವೇರಿಸಲಾಯಿತು.

ಆಸ್ಟ್ರೇಲಿಯಾದ ಮ್ಯಾಕ್‌ವಿಲ್ಲೆಯ ನ್ಯೂ ಸೌತ್‌ವೇಲ್ಸ್‌ನಲ್ಲಿ ಫಿಲಿಪ್ ಹ್ಯೂಸ್‌ನ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ಈ ವೇಳೆ ಫಿಲಿಫ್ ಹ್ಯೂಸ್‌ಗೆ ಅಂತಿಮ ನಮನ ಸಲ್ಲಿಸಿದ್ದ ಕ್ರಿಕೆಟಿಗರು ಹ್ಯೂಸ್ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿ ಕಂಬನಿ ಮಿಡಿದರು.

ಫಿಲಿಪ್ ಹ್ಯೂಸ್‌ಗೆ ಆಸ್ಟ್ರೇಲಿಯಾ ಪ್ರಧಾನಮಂತ್ರಿ  ಟೋನಿ ಅಬೋಟ್, ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಗ್, ಬ್ರಿಯಾನ್ ಲಾರಾ, ಶೇನ್ ವಾರ್ನ್, ಗ್ಲೆನ್ ಮೆಕ್‌ಗ್ರಾತ್, ಆ್ಯಡಮ್ ಗಿಲ್‌ಕ್ರಿಸ್ಟ್ ಸೇರಿದಂತೆ ಅಸೀಸ್ ನಾಯಕ ಮೈಕಲ್ ಕ್ಲಾರ್ಕ್, ಆ್ಯರೋನ್ ಫಿಂಚ್, ಟೀಂ ಇಂಡಿಯಾದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ರವಿ ಶಾಸ್ತ್ರಿ, ರೋಹಿತ್ ಶರ್ಮಾ ಸೇರಿ ಹಲವರಿಂದ ಅಂತಿಮ ನಮನ ಸಲ್ಲಿಸಿದರು.

ಸಿಡ್ನಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶೆಫೀಲ್ಡ್‌ ಶೀಲ್ಡ್‌ ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ದಕ್ಷಿಣ ಆಸ್ಟ್ರೇಲಿಯ ತಂಡದಲ್ಲಿ ಆಡುತ್ತಿದ್ದ ಹ್ಯೂಸ್‌, ನ್ಯೂ ಸೌಥ್‌ ವೇಲ್ಸ್‌ ತಂಡದ ಸೀನ್‌ ಅಬಾಟ್‌ ಎಸೆದ ಬೌನ್ಸರ್‌ ಅನ್ನು ಸರಿಯಾಗಿ ಗುರುತಿಸಲು  ವಿಫಲರಾಗಿದ್ದರು. ವೇಗವಾಗಿ ಬಂದು ಪುಟಿದ ಚೆಂಡು ನೇರವಾಗಿ ಅವರ ಹೆಲ್ಮೆಟ್‌ಗೆ ಬಡಿದಿತ್ತು. ಚೆಂಡು ಅಪ್ಪಳಿಸಿದ ರಭಸಕ್ಕೆ ಪ್ರಜ್ಞೆ ಕಳೆದುಕೊಂಡಿದ್ದ ಅವರು ಕ್ರೀಸ್‌ನಲ್ಲೇ ಕುಸಿದು ಬಿದ್ದಿದ್ದ ಅವರು ಗುರುವಾರ ಸೇಂಟ್‌ ವಿನ್ಸೆಂಟ್ಸ್‌  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಫಿಲ್ ಹ್ಯೂಸ್ ಎಂದೇ ಜನಜನಿತ

ಫಿಲಿಪ್ ಜೋಯೆಲ್ ಹ್ಯೂಸ್ 'ಫಿಲ್ ಹ್ಯೂಸ್‌' ಎಂದೇ ಜನಜನಿತರಾಗಿದ್ದಾರೆ. 25ರ ಹರೆಯದ ಎಡಗೈ ಆರಂಭಿಕ ದಾಂಡಿಗನಾಗಿರುವ ಹ್ಯೂಸ್ 2009ರಕಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ ಒಟ್ಟು 26 ಟೆಸ್ಟ್ ಪಂದ್ಯಗಳನ್ನಾಡಿರುವ ಇವರು 3 ಶತಕ, 7 ಅರ್ಧಶತಕ ಬಾರಿಸಿದ್ದು ಒಟ್ಟು 1,535 ರನ್ ಗಳಿಸಿಕೊಂಡಿದ್ದಾರೆ.
25 ಏಕದಿನ ಪಂದ್ಯಗಳನ್ನು ಆಡಿ, 836 ರನ್ ಗಳಿಸಿರುವ ಇವರು ಏಕದಿನ ಪಂದ್ಯಗಳಲ್ಲಿ 2 ಶತಕ , 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ವಿಕೆಟ್ ಕೀಪಿಂಗ್ ಮೂಲಕವೂ ಗುರುತಿಸಿಕೊಂಡಿದ್ದ ಹ್ಯೂಸ್ ಟೆಸ್ಟ್‌ನಲ್ಲಿ ಅನುಭವಿ ಕ್ರಿಕೆಟರ್ ಎಂದೆನಿಸಿಕೊಂಡಿದ್ದರೂ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಲು ಸಾಧ್ಯವಾಗಿರಲಿಲ್ಲ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT