ಎಸ್. ನೀಯಾ ಜೋಸೆಫ್ ಮತ್ತು ಎಸ್.ಸೆಲ್ವಿ ಸಂತೋಸಂ 
ದೇಶ

ಸರ್ಕಾರಿ ಕೆಲಸ ಪಡೆದ ದೇಶದ ಪ್ರಥಮ ಲೈಂಗಿಕ ಅಲ್ಪಸಂಖ್ಯಾತರು

ತಮಿಳುನಾಡು ಸರ್ಕಾರ ರಾಜೀವ್..

ಚೆನ್ನೈ: ತಮಿಳುನಾಡು ಸರ್ಕಾರ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿ ನೀಡಿದೆ.

ಎಸ್.ಸೆಲ್ವಿ ಸಂತೋಸಂ(30) ಮತ್ತು ಎಸ್. ನೀಯಾ ಜೋಸೆಫ್(28) ಸರ್ಕಾರಿ ಕೆಲಸ ಪಡೆದುಕೊಂಡ ದೇಶದ ಪ್ರಥಮ ಲೈಂಗಿಕ ಅಲ್ಪಸಂಖ್ಯಾತರಾಗಿದ್ದಾರೆ.

ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಫಿಸಿಯೋತೆರಪಿಸ್ಟಾಗಿ ಸೆಲ್ವಿ ಸಂತೋಸಂ ಹಾಗೂ ಮೈಕ್ರೋಬಯೋಲಾಜಿಸ್ಟಾಗಿ ನೀಯಾ ಜೋಸೆಫ್ ನೇಮಕಗೊಂಡಿದ್ದಾರೆ.

ಸರ್ಕಾರಿ ಉದ್ಯೋಗ ಪಡೆಯಲು ಸಾಕಷ್ಟು ಅವಮಾನ, ತಾರತಮ್ಯ, ಸಂಕಷ್ಟಗಳನ್ನು ಎಂದುರಿಸಿರುವ ಈ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ಕೊನೆಗೂ ಸರ್ಕಾರಿ ಉದ್ಯೋಗಿಗಳಾಗಿ ಜನ ಸೇವೆ ಮಾಡಲು ಮುಂದಾಗಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಕಲ್ಲಕರುಚಿ ಹಳ್ಳಿಯಿಂದ ಬಂದ ಸೆಲ್ವಿ, ಚೆನ್ನೈನ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದುಕೊಂಡಿದ್ದಾರೆ. ವ್ಯಾಸಂಗ ಮಾಡುತ್ತಿರಬೇಕಾದರೇ ಸಾಕಷ್ಟು ಸಂಕಷ್ಟಕ್ಕೆ ಗುರಿಯಾಗಿದ್ದೆನು. ಹೆತ್ತವರಿಗೆ ನನ್ನ ವ್ಯಾಸಂಗ ಮುಂದುವರೆಸಲು ಇಷ್ಟವಿರಲಿಲ್ಲ. ಆದರೆ, ನನಗೆ ಸರ್ಕಾರಿ ಸೀಟು ದೊರೆತ ಹಿನ್ನೆಲೆಯಲ್ಲಿ ವ್ಯಾಸಂಗ ಮುಂದುವರೆಸಿದೆ. ಕೆಲವರು ಕೆಲಸದಲ್ಲಿ ನನ್ನ ಆಸಕ್ತಿ ನೋಡಿ ನನಗೆ ಅವಕಾಶ ನೀಡಿದರು.

2013 ಸರ್ಕಾರಿ ಉದ್ಯೋಗಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿ ವಿಫಲವಾಗಿದ್ದೆ. ತದ ನಂತರ ಇತ್ತೀಚೆಗಷ್ಟೇ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಉದ್ಯೋಗ ಭರ್ತಿಗಾಗಿ ಅರ್ಜಿ ಆಹ್ವಾನಿಸಿತ್ತು. ಉದ್ಯೋಗಕ್ಕಾಗಿ ನಾನು ಅರ್ಜಿ ಸಲ್ಲಿಸಿದ್ದೆ. ಈಗ ನನಗೆ ಕೆಲಸ ಸಿಕ್ಕಿದೆ ಎಂದು ತಮ್ಮ ಮನದಾಳದ ಮಾತನ್ನು ಸೆಲ್ವಿ ಬಿಚ್ಚಿಟ್ಟಿದ್ದಾರೆ.

ನೀಯಾ ಜೋಸೆಫ್ ಸೆಲಂ ನಿವಾಸಿಯಾಗಿದ್ದು, ಜನರು ನಮ್ಮನ್ನು ವಿಭಿನ್ನವಾಗಿ ಪರಿಗಣಿಸಿ, ಟೀಕಿಸುತ್ತಾರೆ. ನಮಗೂ ಕುಟುಂಬವಿದೆ, ನಾವು ಮನುಷ್ಯರೇ ನಮ್ಮನೇಕೆ ವಿಚಿತ್ರವಾಗಿ ನೋಡಬೇಕು ಎಂದು ನೀಯಾ ವಿಷಾಧ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್