ಜಾನಕಿರಾಮ್ ಅಂತ್ಯಕ್ರಿಯೆಗೂ ಮೊದಲು ನಡೆದ ಅಂತಿಮಯಾತ್ರೆ (ಸಂಗ್ರಹ ಚಿತ್ರ) 
ದೇಶ

ನಂದಮೂರಿ ಜಾನಕಿರಾಮ್ ಅಂತ್ಯಕ್ರಿಯೆ ಪೂರ್ಣ

ಶನಿವಾರ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಹೈದರಾಬಾದ್: ಶನಿವಾರ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಎನ್‌ಟಿಆರ್ ಮೊಮ್ಮಗ ಜಾನಕಿ ರಾಮ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಹೈದರಾಬಾದ್‌ನ ಹೊರವಲಯದಲ್ಲಿರುವ ಮೊಯಿನಾಬಾದ್‌ನಲ್ಲಿರುವ ಎನ್‌ಟಿಆರ್ ಕುಟುಂಬದ ಒಡೆತನದ ಫಾರಂಹೌಸ್‌ನಲ್ಲಿ ಜಾನಕಿ ರಾಮ್ ಅವರ ಮೃತದೇಹದ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಆಂಧ್ರಪ್ರದೇಶದ ಪ್ರಮುಖ ರಾಜಕಾರಣಿಗಳು, ಚಿತ್ರತಾರೆಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಎನ್‌ಟಿಆರ್ ಅವರ ಮಗ ಹರಿಕೃಷ್ಣ ಅವರ ಪುತ್ರ ಮತ್ತು ಜೂ.ಎನ್‌ಟಿಆರ್ ಅವರ ಸಹೋದರರಾಗಿರುವ ಜಾನಕಿರಾಮ್ ಅವರು ನಿನ್ನೆ ಆಂಧ್ರಪ್ರದೇಶದ ನಲ್ಗೊಂಡ ಬಳಿ ರಸ್ತೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು. ಸ್ಕಾರ್ಪಿಯೋ ವಾಹನದಲ್ಲಿ ಚಲಿಸುತ್ತಿದ್ದ ಜಾನಕಿರಾಮ್ ಅವರು ಟ್ರಾಕ್ಟರ್‌ಗೆ ಗುದ್ದಿದ್ದರು. ಈ ವೇಳೆ ಅವರ ಹೃದಯ ಮತ್ತು ತಲೆಗೆ ಬಲವಾದ ಪೆಟ್ಟುಬಿದ್ದಿತ್ತು.

ಕೂಡಲೇ ಅವರನ್ನು ಕೋದಾಡ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿತಾದರೂ, ಹೃದಯಕ್ಕೆ ಬಿದ್ದಿದ್ದ ಬಲವಾದ ಪೆಟ್ಟಿನಿಂದಾಗಿ ರಕ್ತ ಪರಿಚಲನೆಯಾಗದೇ ಅವರು ನಿಧನರಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026 : ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಒಲಿಂಪಿಕ್ಸ್‌ಗೆ ಅರ್ಹತೆ

ಭಾರತದಲ್ಲಿ ಕಳೆದ 8 ತಿಂಗಳಲ್ಲಿ 254 ಹಿಂದೂಗಳು ಮುಸ್ಲಿಂ ಜಿಹಾದಿ ಹಿಂಸಾಚಾರಕ್ಕೆ ಬಲಿ: ಎಲ್ಲಿದೆ ನ್ಯಾಯ; VHP

ಭಾರತೀಯ ವಾಯುಪಡೆಗೆ ವರ್ಷಕ್ಕೆ 36-40 ಹೊಸ ಯುದ್ಧ ವಿಮಾನಗಳ ಅಗತ್ಯ: ವಾಯುಸೇನಾ ಮುಖ್ಯಸ್ಥ

ಆಸ್ಪತ್ರೆಗೆ ಭೇಟಿ ನೀಡಿ, ಫ್ಲೈದುಬೈ ಹೀರೋ ಸ್ಮಿತ್ ಮಚ್ಚಾರ್ ಹಣೆಗೆ ಮುತ್ತಿಟ್ಟ ದುಬೈ ಕ್ರೌನ್ ಪ್ರಿನ್ಸ್! ಹೇಳಿದ್ದೇನು?

BSFನಿಂದ ಇಬ್ಬರು ಪಾಕಿಗಳ ಹತ್ಯೆ: ಭಾರತೀಯ ರಾಯಭಾರಿ ಕರೆಸಿಕೊಂಡು, ಪ್ರತಿಭಟನೆ ದಾಖಲಿಸಿದ ಪಾಕಿಸ್ತಾನ!