ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿಯ ಟೈಮ್ ವರ್ಷದ ವ್ಯಕ್ತಿ ಗೌರವಕ್ಕೆ ಭಾಜನರಾಗುವುದು ಬಹುತೇಕ ಖಚಿತವಾಗಿದೆ. ಈ ಗೌರವಕ್ಕಾಗಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ನಡೆಸಲಾಗುತ್ತಿದ್ದ ಮತದಾನ ಶನಿವಾರ ಅಂತ್ಯಗೊಂಡಿದೆ. ಮತದಾನ ಅಂತಿಮ ದಿನ ನರೇಂದ್ರ ಮೋದಿ ಶೇ. 15.4 ರಷ್ಟು ಮತ ಪಡೆದು ಅಗ್ರಸ್ಥಾನದಲ್ಲಿದ್ದರು. ಫರ್ಗ್ಯುಸನ್ ಪ್ರತಿಭಟನಾಕಾರರು
ಶೇ.9.4 ರಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಇವರು ಮೋದಿಗೆ ಸ್ಪರ್ಧೆ ನೀಡುವುದು ಕಡಿಮೆ.
ಸೋಮವಾರ ಓದುಗರ ವೋಟಿಂಗ್ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಬುಧವಾರ ಟೈಮ್ ವರ್ಷದ ವ್ಯಕ್ತಿ ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಈಗಾಗಲೇ ಓದುಗರ ವೋಟಿಂಗ್‌ನಲ್ಲಿ ಪ್ರಥಮ ಸ್ಥಾನದಲ್ಲರುವ ಮೋದಿಯೇ ಟೈಮ್ ವರ್ಷದ ವ್ಯಕ್ತಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.