ಪ್ರಣಬ್ ಮುಖರ್ಜಿ 
ದೇಶ

ರಾಷ್ಟ್ರಪತಿ ಬರ್ತಾರೆ, ಬೇರೆ ರಸ್ತೆ ಬಳಸಿ

ತುಮಕೂರು ರಸ್ತೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆಯೋಜಿಸಿರುವ ಕರ್ನಾಟಕ ಮೊಬೈಲ್ 1 ಚಾಲನಾ...

ಬೆಂಗಳೂರು: ತುಮಕೂರು ರಸ್ತೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಆಯೋಜಿಸಿರುವ ಕರ್ನಾಟಕ ಮೊಬೈಲ್ 1 ಚಾಲನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರ ಆಗಮನ ಹಿನ್ನೆಲೆಯಲ್ಲಿ ಡಿ.8 ರಂದು ಮಧ್ಯಾಹ್ನ 2.30 ರಿಂದ ಸಂಜೆ 6 ರ ನಡುವೆ ನಗರದ ಕೆಲವು ಮಾರ್ಗದಲ್ಲಿ ಸಾರ್ವಜನಿಕರ  ವಾಹನ ಸಂಚಾರಕ್ಕೆ ತೊಡಕುಂಟಾಗುವ  ಸಾಧ್ಯತೆ ಇದೆ.

ಎಲ್ಲೆಲ್ಲಿ?
: ಯಲಹಂಕ ಏರ್‌ಫೋರ್ಸ್ ಸ್ಟೇಷನ್‌ನಿಂದ ನಿರ್ಗಮಿಸಿ ಬಳ್ಳಾರಿ ರಸ್ತೆಯಲ್ಲಿ ಬಿಎಸ್‌ಎಫ್ ತರಬೇತಿ ಕೇಂದ್ರ, ಬಾಗಲೂರು ಕ್ರಾಸ್, ವೆಂಕಟಾಲ, ಕೋಗಿಲು ಕ್ರಾಸ್, ವಿದ್ಯಾ ಶಿಲ್ಪ ಅಪ್ ರ್ಯಾಂಪ್, ಕೆಂಪಾಪುರ ಕ್ರಾಸ್ , ಹೆಬ್ಬಾಳ ಮೇಲ್ಸೇತುವೆ, ಸಂಜಯ ನಗರ ಕ್ರಾಸ್, ಮೇಕ್ರಿ ವೃತ್ತ ಅಪ್ ರ್ಯಾಂಪ್, ಸಿ.ವಿ ರಾಮನ್ ರಸ್ತೆ, ಸದಾಶಿವ ನಗರ ಠಾಣೆ ಜಂಕ್ಷನ್, ಯಶವಂತಪುರ ಮೇಲ್ಸೇತುವೆ, ಮಾರಪ್ಪನ ಪಾಳ್ಯ  ಜಂಕ್ಷನ್, ಆರ್‌ಎಂಸಿ ಯಾರ್ಡ್ ಯು ತಿರುವು, ಗೊರಗುಂಟೆ ಪಾಳ್ಯ ಜಂಕ್ಷನ್, ಸಿಎಂಟಿಐ ಜಂಕ್ಷನ್, ಪೀಣ್ಯ ವಿಲೇಜ್, ಹೆಸರುಘಟ್ಟ ಕ್ರಾಸ್ , ಚಿಕ್ಕ ಬಿದರಕಲ್ಲು ಮೂಲಕ ರಾಷ್ಟ್ರಪತಿಯವರು ಪ್ರದರ್ಶನ ಕೇಂದ್ರ ತಲುಪಲಿದ್ದಾರೆ.
ಇದೇ ಮಾರ್ಗದಲ್ಲೇ ವಾಪಸ್ ಯಲಹಂಕ ಏರ್‌ಫೋರ್ಸ್ ಸ್ಟೇಷನ್ ತಲುಪಲಿದ್ದಾರೆ. ಈ ವೇಳೆ ಸಾರ್ವಜನಿಕರಿಗೆ  ಅನನುಕೂಲವಾಗುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಈ ರಸ್ತೆಗಳಲ್ಲಿ ಸಂಚರಿಸದೇ ಪರ್ಯಾಯ ಮಾರ್ಗ ಬಳಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ