ನವದೆಹಲಿ: ಶುಕ್ರವಾರ ರಾತ್ರಿ ದೆಹಲಿಯಲ್ಲಿ 25ರ ಹರೆಯದ ಮಹಿಳೆಯೊಬ್ಬರನ್ನು ಕ್ಯಾಬ್ನಲ್ಲಿ ಅತ್ಯಾಚಾರವೆಸಗಿದ್ದ ಆರೋಪಿ ಕ್ಯಾಬ್ ಚಾಲಕನನ್ನು ದೆಹಲಿ ನ್ಯಾಯಾಲಯ 3 ದಿನ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ತಲೆಮರಿಸಿಕೊಂಡಿದ್ದ ಉಬರ್ ಟ್ಯಾಕ್ಸಿ ಕಂಪನಿಯ ಚಾಲಕ ಶಿವ್ ಕುಮಾರ್ ಯಾದವ್ನನ್ನು ಉತ್ತರ ಪ್ರದೇಶದ ಮಥುರಾ ನಗರದಿಂದ ಪೊಲೀಸರು ಭಾನುವಾರ ಬಂಧಿಸಿದ್ದರು. ಇಂದು ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 3 ದಿನ ಪೊಲೀಸರ ವಶಕ್ಕೆ ನೀಡಿದೆ.
2011ರಲ್ಲಿ ದೆಹಲಿಯ ಮೆಹರೌಲಿ ಪ್ರದೇಶದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈತ ತಿಹಾರ್ ಜೈಲಿನಲ್ಲಿ 7 ತಿಂಗಳು ಶಿಕ್ಷೆ ಅನುಭವಿಸಿದ್ದ ಎಂಬ ವಿಚಾರವನ್ನು ಸ್ವತಃ ಆತನೇ ಪೊಲೀಸರಿಗೆ ಹೇಳಿದ್ದಾನೆ.