ದೇಶ

"ಈಟನ್ ಆಲೈವ್" ಬಂಡಲ್..!

Srinivasamurthy VN

ವಾಷಿಂಗ್‌ಟನ್: ಅನಕೊಂಡ ಹಾವಿನ ಪಚನ ಕ್ರಿಯೆಯನ್ನು ಅಧ್ಯಯನ ಮಾಡಲು ತಾನೇ ಸ್ವಯಂ ಆಗಿ ಅನಕೊಂಡಕ್ಕೆ ಆಹಾರವಾಗುವುದಾಗಿ ಹೇಳಿ ವಿಶ್ವಾದ್ಯಂತ ಸಂಚಲನ ಸೃಷ್ಟಸಿದ್ದ ನಿಸರ್ಗ ಪ್ರೇಮಿ ಪಾಲ್ ರಸೋಲಿ ಈಗ ನಗೆಪಾಟಲಿಗೀಡಾಗಿದ್ದಾನೆ. ಹಾವಿನ ಬಾಯಿಯೊಳಕ್ಕೆ ಸ್ವಲ್ಪ ಪ್ರವೇಶಿಸುತ್ತಿದ್ದಂತೆ ಕೂಗಿಕೊಂಡು ತನ್ನ ಪ್ರಯೋಗವನ್ನು ಪಾಲ್ ಅರ್ಧಕ್ಕೆ ನಿಲ್ಲಿಸಿದ್ದ ಎಂಬುದು ಸಾಬೀತಾಗಿದೆ.

ಈತನ ಸಾಹಸದ ವಿಡಿಯೋವನ್ನು ಡಿ.7ರಂದು ಡಿಸ್ಕವರಿ ಚಾನೆಲ್ ಅಮೆರಿಕದಲ್ಲಿ ಪ್ರಸಾರ ಮಾಡಿತ್ತು. ಅದರಲ್ಲಿ ಪಾಲ್ ಹಾವಿನ ಹೊಟ್ಟೆಯೊಳಗೆ ಹೋಗಿಲ್ಲ ಎನ್ನುವುದು ಬಯಲಾಗಿದೆ. ಕಳೆದೊಂದು ತಿಂಗಳಿನಿಂದ ಈ ಕಾರ್ಯಕ್ರಮಕ್ಕಾಗಿ ಕಾದು ಕೂತಿದ್ದ ಜನರು, ಈಗ ರೊಚ್ಚಿಗೆದಿದ್ದಾರೆ. ತನ್ನ ಸಾಹಸದ ಬಗ್ಗೆ ಸಿಕ್ಕಸಿಕ್ಕಲೆಲ್ಲಾ ಬಾಯಿಗೆ ಬಂದಂತೆ ಹೇಳಿಕೊಂಡಿದ್ದ ರಸೋಲ್‌ಗೆ ಜನ ಛೀಮಾರಿ ಹಾಕಿದ್ದಾರೆ. ಇದರ ಜತೆಗೆ ಡಿಸ್ಕವರಿ ಚಾನೆಲ್ ಬಗ್ಗೆಯೂ ಟೀಕೆಗಳು ಕೇಳಿ ಬರುತ್ತಿವೆ.

ಏನಾಗಿತ್ತು?
ಕಳೆದೊಂದು ತಿಂಗಳ ಹಿಂದೆ ತಾನೇ ತಯಾರಿಸಿದ್ದ ಸ್ನೇಕ್ ಸೂಟ್ ಧರಿಸಿ, ಹಾವಿನ ಹೊಟ್ಟೆಯೊಳಗೆ ಹೋಗಿ ಒಂದು ತಾಸು ಇದ್ದು, ಜೀರ್ಣ ಕ್ರಿಯೆಯನ್ನು ಚಿತ್ರೀಕರಿಸಿರುವುದಾಗಿ ಪಾಲ್ ಹೇಳಿಕೊಂಡಿದ್ದ. ಆದರೆ ಡಿಸ್ಕವರಿ ಚಾನೆಲ್ ಡಿ.7ರಂದು ಪ್ರಸಾರ ಮಾಡಿದ ವಿಡಿಯೋದಲ್ಲಿ ಪಾಲ್ ಹಾವಿನ ಹೊಟ್ಟೆಯೊಳಗೆ ಹೋಗಿಲ್ಲ. ಸ್ವಲ್ಪ ತಲೆ ಮಾತ್ರ ಹಾವಿನ ಬಾಯಿಯೊಳಗೆ ಹೋಗುತ್ತಿದ್ದಂತೆ, ತನ್ನ ಕೈಗಳು ಅಪ್ಪಚ್ಚಿಯಾಗಿ ರಕ್ತ ಬಂದಿತೆಂದು ಪಾಲ್ ಕೂಗಿ ಕೊಂಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಆತನ ಸಹಚರರು ಆತನನ್ನು ಹಾವಿನ ಬಾಯಿಯಿಂದ ರಕ್ಷಿಸಿದ್ದಾರೆ.

ಡಿಸ್ಕವರಿ ಚಾಲಲ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಇರೋದು ಇಷ್ಟೇ. ತಿಂಗಳ ಹಿಂದೆಯೇ ತನ್ನ ಪ್ರಯತ್ನ ವಿಫಲವಾಗಿದ್ದರೂ, ಪಾಲ್ ಮಾತ್ರ ಸುಮ್ಮನೇ ಜಗತ್ತಿನ ಕಣ್ಣಿಗೆ ಮಣ್ಣೆರಚಿದ್ದಾನಲ್ಲದೆ ಮಾಧ್ಯಮಗಳನ್ನೂ ದಾರಿ ತಪ್ಪಿಸಿದ್ದ.

SCROLL FOR NEXT