ದೇಶ

ಮಿನಿ ಎಲ್ಪಿಜಿಗೂ ಸಬ್ಸಿಡಿ

Rashmi Kasaragodu

ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿರುವ 5 ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ (ಮಿನಿ) ಇನ್ನು ಮುಂದೆ ಸಬ್ಸಿಡಿ ಮೂಲಕವೂ ಸಿಗಲಿದೆ. ಅವು ಎಲ್ಲ ಎಲ್‌ಪಿಜಿ ಡೀಲರ್ ಮತ್ತು ವಿತರಕರ ಬಳಿ ಸಿಗುತ್ತದೆ.

ಸಬ್ಸಿಡಿ ನೀಡುವ ನಿರ್ಧಾರದಿಂದಾಗಿ ಮಿನಿ ಸಿಲಿಂಡರ್ ಪ್ರತಿ ವರ್ಷಕ್ಕೆ 34 ಸಿಗುತ್ತದೆ ಎಂದು ರಾಜ್ಯಸಭೆಯಲ್ಲಿ  ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. 14.2 ಕೆಜೆ ತೂಕದ ಸಿಲಿಂಡರ್ ಮೇಲೆ ಹಾಲಿ ಸಬ್ಸಿಡಿ ಹಿಂಪಡೆಯುವ ಇರಾದೆ  ಸರ್ಕಾರಕ್ಕಿಲ್ಲ ಎಂದಿದ್ದಾರೆ ಪ್ರಧಾನ್.


ಸಬ್ಸಿಡಿ ಎಲ್ಪಿಜಿ ಮಿನಿ ಯಾರಿಗೆ ಅನುಕೂಲ?

  • ಕೇಂದ್ರ ಸರ್ಕಾರ 5 ಕೆಜಿ ತೂಕದ ಸಿಲಿಂಡರ್‌ಗೆ ಸಬ್ಸಿಡಿ ನೀಡಿರುವುದರಿಂದ ಜನತೆಗೆ ಆಗುವ ಅನುಕೂಲದ ಬಗ್ಗೆ ಇಲ್ಲಿದೆ ಮಾಹಿತಿ
  • ಕಡಿಮೆ ಆರ್ಥಿಕ ಅನುಕೂಲ ಹೊಂದಿರುವವರಿಗೆ
  • 14.2 ಕೆಜಿ ಸಿಲಿಂಡರ್ ಅನ್ನು ರಿಫಿಲ್ ಮಾಡಿಸುವುದು ಬೇಡ ಎಂಬ ಕುಟುಂಬಗಳಿಗೆ
  • ಸಾಮಾನ್ಯ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವವರೂ 12 ಸಬ್ಸಿಡಿ ಸಿಲಿಂಡರ್‌ಗಳಿಗೆ ಬದಲಾಗಿ 5.ಕೆ.ಜಿ ತೂಕದ ಸಿಲಿಂಡರ್‌ಗಳನ್ನು ಬಳಸಬಹುದು.
  • ವೆಚ್ಚ ತಗ್ಗಿಸಲು ಇತರ ಕುಟುಂಬಗಳೂ ಮಿನಿ ಸಿಲಿಂಡರ್ ಅನ್ನು ಬಳಸಬಹುದು.
SCROLL FOR NEXT