ದೇಶ

ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಹಿಂದೂಡಲು ಸುಪ್ರೀಂ ನಕಾರ

Mainashree

ನವದೆಹಲಿ: ಅಕ್ರಮ ಆಸ್ತಿಗೆ ಸಂಬಂಧಿಸಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಹಿಂದೂಡಬೇಕು ಎಂಬ ಕೋರಿಕೆಗ ಸುಪ್ರೀಂ ಕೋರ್ಟ್ ಮಣಿ ಹಾಕಿಲ್ಲ.

ಪ್ರಕರಣಕ್ಕೆ ಸಂಬಂಧಿಸದ ಎಲ್ಲ ದಾಖಲೆ ಪತ್ರಗಳನ್ನು 2 ತಿಂಗಳೊಳಗೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಬೇಕು. ಇಲ್ಲದೇ ಇದ್ದರೆ, ನಿಮಗೆ ನಾವು ಒಂದೇ ಒಂದು ದಿನದ ಅವಕಾಶವನ್ನೂ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕಡ್ಡಿ ಮುರಿದಂತೆ ಹೇಳಿದೆ.

ಜಯಾ ಪರ ವಕಾಲತ್ತು ನಡೆಸುತ್ತಿರುವ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು ಡಿ.18ಕ್ಕಿಂತ ಮೊದಲೇ ಜಾಮೀನು ಅರ್ಜಿಯ ವಿಚಾರಣೆ ನಡೆಸುವಂತೆ ಗುರುವಾರ ಸುಪ್ರೀಂಗೆ ಮನವಿ ಮಾಡಿದರು.

ಇದಕ್ಕೊಪ್ಪದ ಸುಪ್ರೀಂ, ನಿಗದಿಯಂತೆ ಡಿ.18ರಂದೇ ವಿಚಾರಣೆ ನಡೆಯಲಿದೆ ಎಂದಿತು.

SCROLL FOR NEXT