ಲಂಡನ್: ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಗೆ ನಿನ್ನೆ ನಡೆದ ವಿಶ್ವ ಸುಂದರಿ ಸಮಾರಂಭದಲ್ಲಿ ಗೌರವಿಸಲಾಗಿದೆ.
ಲಂಡನ್ ಐಸಿಸಿ ಸಭಾಂಗಣದಲ್ಲಿ ಭಾನುವಾರ ನಡೆದ ವಿಶ್ವ ಸುಂದರಿ ಸ್ಪರ್ಧೆಯ ಸಮಾರಂಭದಲ್ಲಿ ಮಕ್ಕಳ ಜತೆಗಿನ ಚಾರಿಟೇಬಲ್ ಕಾರ್ಯಕ್ಕೆಂದು ಐಶ್ವರ್ಯ ರೈಗೆ ಗೌರವಿಸಲಾಯಿತು.
41ರ ಹರೆಯದ ನಟಿ ತನ್ನ ತಾಯಿ, ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯಳೊಂದಿಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ್ದಾರೆ.