ಹೈದ್ರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಾದ ಸಾಯಿಕುಮಾರ್ ಮತ್ತು ರವಿಶಂಕರ್ ತಂದೆ, ತೆಲುಗು ನಟ ಪಿ.ಜೆ ಶರ್ಮಾ(70) ಭಾನುವಾರ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶರ್ಮಾ ಅವರು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಆಂಧ್ರಪ್ರದೇಶದ ವಿಜಯನಗರಂನಲ್ಲಿ ಜನಿಸಿದ ಶರ್ಮಾ ಕನ್ನಡ, ತೆಲುಗು ಮತ್ತು ತಮಿಳಿನ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನ ಆಥನು, ರಾಮ್ ರಾಬರ್ಟ್ ರಹೀಂ, ಕಲೆಕ್ಟರ್ ಜಾನಕಿಯಂಥ ಚಿತ್ರಗಳ ನಟನೆಗಾಗಿ ಅವರ ಹೆಸರು ಗಳಿಸಿದ್ದರು.
ಡಬ್ಬಂಗ್ ಕಲಾವಿದರಾಗಿಯೂ ಶರ್ಮಾ 500 ಸಿನಿಮಾಗಳಲ್ಲಿ ಪ್ರಮುಖ ನಟರಿಗೆ ಕಂಠದಾನ ಮಾಡಿದ್ದಾರೆ. ಶರ್ಮಾರ ಮೂರನೇಯ ಪುತ್ರ ಅಯ್ಯಪ್ಪ ಶರ್ಮಾ ಕೂಡ ತೆಲಗು ನಟ ಮತ್ತು ಕಂಠದಾನ ಕಲಾವಿದರಾಗಿ ಪ್ರಸಿದ್ಧರು.