ದೇಶ

ಸರ್ಕಾರದ 6 ತಿಂಗಳ ರಿಪೋರ್ಟ್ ಕಾರ್ಡ್

Srinivasamurthy VN

ನವದೆಹಲಿ: 100 ದಿನಗಳನ್ನು ಪೂರೈಸಿದ ಮೋದಿ ಸರ್ಕಾರ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ಕೆಲಸ-ಕಾರ್ಯಗಳ ಬಗ್ಗೆ ಮಾಹಿತಿ ನೀಡಿತ್ತು.

ಇದೀಗ 6 ತಿಂಗಳು ಪೂರೈಸಿದ ಸರ್ಕಾರ, 6 ತಿಂಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸಜ್ಜಾಗಿದೆ. ಇದಕ್ಕಾಗಿ ರಿಪೋರ್ಟ್ ಕಾರ್ಡ್ ಅನ್ನು ತಯಾರಿಸಲು ಪ್ರಧಾನಿ ಮೋದಿ ಪ್ರತಿ ಸಚಿವಾಲಯಕ್ಕೂ ಸೂಚಿಸಿದ್ದಾರೆ. ತಿಂಗಳ ಅಂತ್ಯದಲ್ಲಿ ಪ್ರತಿ ಸಚಿವರೂ ತಮ್ಮ ಸಾಧನೆ ಮತ್ತು ಹಿನ್ನಡೆ ಬಗ್ಗೆ ವರದಿ ನೀಡಬೇಕಾಗಿದೆ. ಜನ್ಧನ್ ಯೋಜನೆ. ಮೇಕ್ ಇನ್ ಇಂಡಿಯಾ ಅಭಿಯಾನ, ಕಿಸಾನ್ ವಿಕಾಸ್ ಪತ್ರ ಮತ್ತಿತ್ತರ ಯೋಜನೆಗಳು ಎಷ್ಟರ ಮಟ್ಟಿಗೆ  ಯಶಸ್ವಿಯಾಗಿದೆ ಎಂದೂ ಈ ವರದಿಯಲ್ಲಿ ಉಲ್ಲೇಖಿಸಲಾಗುವುದು.

ಸಾಮಾಜಿಕ ತಾಣಗಳಲ್ಲಿ ರಿಪೋರ್ಟ್ ಕಾರ್ಡ್
ಇ-ಬುಕ್ ಮತ್ತು ವಿಡಿಯೋ ಕ್ಲಿಪ್‌ಗಳ ಮೂಲಕ ವರದಿ ಒಪ್ಪಿಸಲಾಗವುದು. ಇವುಗಳ ಅಧಾರದ ಮೇಲೆ ರಿಪೋರ್ಟ್ ಕಾರ್ಡ್ ತಯಾರಿಸಲಾಗುವುದು ಸುದ್ದಿಗೋಷ್ಠಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ರಿಪೋರ್ಟ್ ಕಾರ್ಡ್ ಅನ್ನು ಪ್ರಕಟಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಯೋಜನೆಗಳ ಮಹತ್ವವನ್ನು ಜನರಿಗೆ ತಿಳಿಸಲು ಕೈಪಿಡಿಯನ್ನು ಬಿಡುಗಡೆ ಮಾಡಿ ತಮ್ಮ-ತಮ್ಮ ಕ್ಷೇತ್ರದಲ್ಲಿ ವಿತರಿಸಲಾಗುವುದು.

SCROLL FOR NEXT