ದೇಶ

'ಅರ್ಥಪೂರ್ಣ ಚಿತ್ರಗಳಿಗೆ ಗ್ರಾಮಗಳು ಆಧಾರ'

Lakshmi R

ತಿರುವನಂತಪುರ: ವಾಣಿಜ್ಯ ಚಿತ್ರಗಳು ನಗರ ಕೇಂದ್ರಿತ ಕಥೆಗಳನ್ನುಳ್ಳವು. ಆದರೆ ಅರ್ಥಪೂರ್ಣವಾದ ಕನ್ನಡ ಚಿತ್ರಗಳು ಇಂದಿಗೂ ಹಳ್ಳಿ ಮತ್ತು ಗ್ರಾಮಗಳ ಕಥೆಗಳನ್ನು ಆಧರಿಸಿ ಚಿತ್ರೀಕರಿಸಲಾಗುತ್ತವೆ.

ಹೀಗೆಂದು ಕನ್ನಡ ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ ಹೇಳಿದ್ದಾರೆ. ಇಂಥ ಚಲನಚಿತ್ರಗಳ ಮೇಲೆ ಹೆಚ್ಚಾಗಿ ರಂಗಭೂಮಿ ಮತ್ತು ಸಾಹಿತ್ಯದ ಪ್ರಭಾವ ಇರುತ್ತದೆ.

ಕೇರಳದ 19ನೇ ಅಂತಾರಾಷ್ಟ್ರೀಯ ಚಿತ್ರೋತ್ಸವ(ಐಎಫ್ಎಫ್ಕೆ)ದಲ್ಲಿ ಮಾತನಾಡಿದ ಶೇಷಾದ್ರಿ ಅವರು, ಮುಖ್ಯ ವಾಹಿನಿಯಲ್ಲಿ ವಾಣಿಜ್ಯ ಚಿತ್ರಗಳ ಬೇಡಿಕೆ ಹೆಚ್ಚಿದೆ.

ಆದರೆ ಕನ್ನಡಲ್ಲಿ ಸಂವೇದನಾಶೀಲ ಚಿತ್ರಗಳು ಮಾಡುವುದಾದರೆ ಗ್ರಾಮಗಳ ಕಥೆಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ ಎಂದರು. ಶೇಷಾದ್ರಿ ಅವರ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ 'ಡಿಸೆಂಬರ್-1' ವೀಕ್ಷಿಸಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು.

SCROLL FOR NEXT