ದೇಶ

ಉತ್ತಮ ಆಡಳಿತ: ಪ್ರಧಾನಿ ಮೋದಿಗೆ 2ನೇ ಸ್ಥಾನ

Vishwanath S

ಬೀಜಿಂಗ್: ಉತ್ತಮ ಆಡಳಿತ ನೀಡುತ್ತಿರುವ ಜಗತ್ತಿನ 30 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಸ್ಥಾನದಲ್ಲಿದ್ದು, ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಅಗ್ರಸ್ಥಾನದಲ್ಲಿದ್ದಾರೆ.

ನಾಗರೀಕರ ವಿಶ್ವಾಸ ಅರ್ಹತೆ ಆಧರಿಸಿ ಜಪಾನಿನ ಮಾರುಕಟ್ಟೆ ಸಂಶೋಧನಾ ಸಂಸ್ಥೆಯ ಈ ಸರ್ವೇ ಮಾಡಿದೆ. ಸರ್ವೇ ಪ್ರಕಾರ, ಉನ್ನತ ಪ್ರದರ್ಶನ ನೀಡುತ್ತಿರುವ ಪ್ರಭಾವಿ ನಾಯಕ ಪಟ್ಟಿಯಲ್ಲಿ ಚೀನಾದ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಮೊದಲ ಸ್ಥಾನದಲ್ಲಿದ್ದಾರೆ. ನಂತರ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇದ್ದು, ಜರ್ಮನಿಯ ಕುಲಪತಿ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ.

ಟೋಕಿಯೋ ಮೂಲದ ಜಿಎಂಒ ಸಂಶೋಧನೆಯಲ್ಲಿ 26 ಸಾವಿರ ಮಂದಿಯನ್ನು ಸರ್ವೇಗೊಳಪಡಿಸಲಾಗಿತ್ತು. ಅದರಂತೆ ಹತ್ತರಲ್ಲಿ ಕ್ಸೀ ಜಿನ್‌ಪಿಂಗ್ 7.5, ಮೋದಿ 7.3, ಮರ್ಕೆಲ್ 7.2 ಅಂಕ ಗಳಿಸಿ ಟಾಪ್ ಮೂರು ಸ್ಥಾನ ಪಡೆದಿದ್ದಾರೆ.

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುತ್ತಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ 6.6 ಅಂಕಿ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 6.5 ಅಂಕ ಸಂಪಾದಿಸಿರುವ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಐದನೇ ಸ್ಥಾನದಲ್ಲಿದ್ದಾರೆ.

ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್, ಜಪಾನಿನ ಪ್ರಧಾನಿ ಶಿನ್ಝೋ ಅಬೆ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರಮವಾಗಿ ಆರು, ಏಳು, ಎಂಟನೇ ಸ್ಥಾನದಲ್ಲಿದ್ದಾರೆ.

SCROLL FOR NEXT