ನವದೆಹಲಿ: ಮುಳುಗುತ್ತಿರುವ ಹಡಗಿನಂತಾಗಿರುವ ಸ್ಪೈಸ್ ಜೆಟ್ ವೈಮಾನಿಕ ಸಂಸ್ಥೆ ಮತ್ತೆ ಮೇಲಕ್ಕೇಳಲಿದೆಯೇ?
ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಸನ್ ಗ್ರೂಪ್ ಒಡೆತನದ ಸ್ಪೈಸ್ ಜೆಟ್‌ಗೆ ಪುನರುಜ್ಜೀವನ ನೀಡಲು ಅದರ ಮೂಲ ಪ್ರವರ್ತಕ ಅಜಯ್ ಸಿಂಗ್ ಒಲವು ವ್ಯಕ್ತ ಪಡಿಸಿದ್ದಾರೆ. ಇತರ ಹೂಡಿಕೆದಾರರ ಜತೆ ಸೇರಿಕೊಂಡು ವೈಮಾನಿಕ ಸಂಸ್ಥೆಯನ್ನು ಮತ್ತೆ ಬಲಪಡಿಸುವುದು ಇವರ ಇರಾದೆ. ಭಾರತೀಯ ಮತ್ತು ವಿದೇಶಿ ಹೂಡಿಕೆದಾರರು ಮುಂದೆ ಒಂದು ಸ್ಪೈಸ್ ಜೆಟ್ ನಲ್ಲಿ ರು. 1,200 ಕೋಟಿ ಹೂಡಿಕೆ ಮಾಡುವ ಚಿಂತನೆ ನಡೆಸುತ್ತಿದ್ದಾರೆ.
4-6 ವಾರಗಳ ಬಳಿಕ: ಸಂಕಷ್ಟಕ್ಕೆ ಸಿಲುಕಿರುವ ಅಗ್ಗದ ದರದ ಸ್ಪೈಸ್ ಜೆಟ್ ನ ಆಸ್ತಿಪಾಸ್ತಿ ಹಾಗೂ ಹೊಣೆಗಾರಿಕೆ ಬಗ್ಗೆ ಮೌಲ್ಯಮಾಪನ ಮಾಡಲು ಇನ್ನೂ 4 ರಿಂದ 6 ವಾರಗಳು ಬೇಕು. ಈ ಪ್ರಕ್ರಿಯೆಯೆಲ್ಲ ಪೂರ್ಣಗೊಂಡ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಹೂಡಿಕೆಯ ಬಗ್ಗೆ ಅಂತಿಮ ನಿರ್ಧಾರವಾದರೆ ಸ್ಪೈಸ್ ಜೆಟ್‌ನ ಒಡೆತನವು ಮಾಧ್ಯಮ ದೊರೆ ಕಲಾನಿಧಿ ಮಾರನ್ ನಿಂದ ಹೂಡಿಕೆ ಮಾಡಿದ ವ್ಯಕ್ತಿದೆ ವರ್ಗಾಯಿಸಲ್ಪಡುತ್ತದೆ. ಹೀಗಾಗಿ ಮಾರನ್ ಅವರ ಸನ್‌ಗ್ರೂಪ್ ಅಲ್ಪ ಪ್ರಮಾಣದ ಷೇರುದಾರನಾಗಿ ಮುಂದುವರಿಯಲಿದೆ. ಸ್ಪೈಸ್ ಜೆಟ್ ಕಂಪನಿಯಲ್ಲಿ ಮಾರನ್ ಹಾಗೂ ಸನ್ ಗ್ರೂಪ್ ಶೇ.53.48 ಷೇರುಗಳನ್ನು ಹೊಂದಿದ್ದಾರೆ.