ವಿಶ್ವಸಂಸ್ಥೆ: ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸಂಸ್ಥಾಪಕ, ಅಂತಾರಾಷ್ಟ್ರೀಯ ಉಗ್ರ ಹಫೀಜ್ ಸಯೀದ್ ನನ್ನು 'ಸಾಹಿಬ್' ಎಂದು ಸಂಬೋದಿಸಿದ್ದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಷಾಧ ವ್ಯಕ್ತಪಡಿಸಿದೆ.
ಈ ಸಂಬಂಧ ಅಲ್ಖೈದಾದ ವಿರುದ್ಧ ನಿರ್ಬಂಧ ಹೇರುವ ಸಮಿತಿಯು ಹೊಸದಾಗಿ ಪತ್ರವೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ ಉಗ್ರ ಸಯೀದ್ನನ್ನು 'ಸಾಹಿಬ್' ಎಂದು ಕರೆದಿದ್ದಕ್ಕೆ ವಿಷಾಧ ವ್ಯಕ್ತಪಡಿಸಿದೆ.
ಮುಂಬೈ ದಾಳಿಯ ರೂವಾರಿಯಾಗಿರುವ ಉಗ್ರ ಸಯೀದ್ನನ್ನು 'ಸಾಹಿಬ್' ಎಂದು ಗೌರವ ಕೊಟ್ಟು ಕರೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕ್ರಮಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಸಂಬಂಧ ಶನಿವಾರವಷ್ಟೇ ಭದ್ರತಾ ಮಂಡಳಿಗೆ ಖಾರವಾದ ಪತ್ರ ಬರೆದಿತ್ತು.