ದೇಶ

59 ಮಂದಿ ಮತಾಂತರ

ಅಳಪ್ಪುಳ: ಮರುಮತಾಂತರ ವಿವಾದ ಬಿಸಿಯಾಗಿರುವ ನಡುವೆಯೇ ಕೇರಳದಲ್ಲಿ ಗುರುವಾರ ಮತ್ತೆ 59 ಮಂದಿಯನ್ನು ಹಿಂದೂ ಧರ್ಮಕ್ಕೆ ಮರುಮತಾಂತರ ಮಾಡಲಾಗಿದೆ.

ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕೊಟ್ಟಾಯಂನ ದೇವಾಲಯದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಕೇರಳ ಸಿಎಂ ಉಮ್ಮನ್ ಚಾಂಡಿ, ಬಲವಂತದಿಂದ ಮತಾಂತರ ನಡೆಸಲಾಗದು. ಸರ್ಕಾರ ಮಧ್ಯಪ್ರವೇಶಿಸಬೇಕಾದ ಸಂದರ್ಭ ಬಂದರಷ್ಟೇ ನಾವು ಮುಂದುವರಿಯುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮತಾಂತರ ವಿರೋಧಿ ಕಾನೂನು ಜಾರಿಯಾಗುವವರೆಗೆ ದೇಶದಲ್ಲಿ ಮತಾಂತರ ನಡೆಯುತ್ತಲೇ ಇರುತ್ತವೆ ಎಂದು ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಹೇಳಿದ್ದಾರೆ. ಮತಾಂತರ ನಿಲ್ಲಬೇಕಾದರೆ ಎಲ್ಲ ಪಕ್ಷಗಳು ಮತಾಂತರ ವಿರೋಧಿ ಕಾನೂನು ಬೆಂಬಲಿಸಬೇಕು. ವಿಧೇಯಕಕ್ಕೆ ಸಂಸತ್ತು ಅನುಮೋದನೆ ನೀಡುವವರೆಗೆ ಈ ಪ್ರಕರಣಗಳು ನಡೆಯುತ್ತವೇ ಇರುತ್ತವೆ ಎಂದು ಸುಷ್ಮಾ ಹೇಳಿದ್ದಾರೆ.

SCROLL FOR NEXT