ಇಸ್ಲಾಮಾಬಾದ್: ಪೇಶಾವರದ ಸೇನಾ ಶಾಲೆಯಲ್ಲಿ ನಡೆದ 180 ಮಂದಿಯ ಹತ್ಯಾಕಾಂಡದ ರೂವಾರಿ, ತಾಲಿಬಾನ್‌ನ ಹಿರಿಯ ಕಮಾಂಡರ್ ನನ್ನು ಹೊಡೆದುರುಳಿಸುವಲ್ಲಿ ಪಾಕ್ ಸೇನೆ ಯಶಸ್ವಿಯಾಗಿದೆ.
ಜಮ್ರುದ್‌ನ ಗಂಡಿ ಎಂಬ ಪ್ರದೇಶದಲ್ಲಿ ಗುರುವಾರ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಕಮಾಂಡರ್ ಸದ್ದಾಂನನ್ನು ಹತ್ಯೆಗೈದಿರುವುದಾಗಿ ಪಾಕ್ ಸೇನೆ ತಿಳಿಸಿದೆ. ಇದೇ ವೇಳೆ ಆತನ ಒಬ್ಬ ಸಹಚರನನ್ನು ಬಂಧಿಸಲಾಗಿದೆ.
ಜೈಲು ದಾಳಿ ಸಂಚು ವಿಫಲ: ಪಾಕಿಸ್ತಾನದ ಕೋಟ್ ಲಖ್‌ಪತ್ ಜೈಲಿನ ಮೇಲೆ ದಾಳಿ ನಡೆಸಲು ಉಗ್ರರು ರೂಪಿಸಿದ್ದ ಸಂಚನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ. ಗಲ್ಲುಶಿಕ್ಷೆಗೊಳಗಾಗಿರುವ 50 ಮಂದಿ ಕೈದಿಗಳು ಈ ಜೈಲಲ್ಲಿದ್ದಾರೆ. ಇಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು.
ಇದನ್ನು ಯಶಸ್ವಿಯಾಗಿ ವಿಫಲಗೊಳಿಸಿದ ಭದ್ರತಾ ಪುರುಷನನ್ನು ಬಂಧಿಸಿದೆ. ಬಂಧಿತರಿಂದ ರಾಕೆಟ್ ಲಾಂಚರ್, ಭದ್ರತಾ ಸಿಬ್ಬಂದಿಯ ಸಮವಸ್ತ್ರಗಳು, ಶೂಗಳು, ಗನ್‌ಗಳು, ಬಿಲ್ಲುಬಾಣಗಳು, ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.
ಲಖ್ವಿ ಮೇಲ್ಮನವಿ: 2008ರ ಮುಂಬೈ ದಾಳಿಯ ಸಂಚುಕೋರ, ಉಗ್ರ ಝಕೀವುರ್ ರೆಹಮಾನ್ ಲಖ್ವಿ ಸಾರ್ವಜನಿಕ ಭದ್ರತಾ ಸುವ್ಯವಸ್ಥೆ ಹೆಸರಿನಲ್ಲಿ ತನ್ನನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಶುಕ್ರವಾರ ಪಾಕಿಸ್ತಾನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.