ದೇಶ

ಜಾರ್ಖಂಡ್‌ನ ನೂತನ ಸಿಎಂ ಆಗಿ ರಘುಬರ್ ದಾಸ್ ಪ್ರಮಾಣ ವಚನ

Lakshmi R

ರಾಂಚಿ: ಜಾರ್ಖಂಡ್‌ನಲ್ಲಿ ಪ್ರಪ್ರಥಮ ಬಾರಿಗೆ ಜನಾಂಗೇರತರ ಮುಖ್ಯಮಂತ್ರಿಯಾಗಿ ರಘುಬರ್ ದಾಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನಗರದ ಫುಟ್ಪಾಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸೈಯದ್ ಅಹಮ್ಮದ್, ಜಾರ್ಖಂಡ್‌ನ 10ನೇ ಮುಖ್ಯಮಂತ್ರಿಯಾಗಿ ರಘುಬರ್ ದಾಸ್‌ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ವೇಳೆ ನಾಲ್ವರು ಶಾಸಕರು ನೂತನ ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ನಾಲ್ವರು ಶಾಸಕರ ಪೈಕಿ ಮೂವರು ಬಿಜೆಪಿ, ಹಾಗೂ ಮತ್ತೋರ್ವ ಜೆಡಿಎಸ್ ಶಾಸಕರಾಗಿದ್ದಾರೆ.

ನೀಲಕಂಠ ಸಿಂಗ್ ಮುಂಡಾ-ಜಾರ್ಖಂಡ್‌ನ ಖೂಂಟಿ ಕ್ಷೇತ್ರದ ಬಿಜೆಪಿ ಶಾಸಕ, ಸಿ.ಪಿ.ಸಿಂಗ್ ಜಾರ್ಖಂಡ್‌ನ ರಾಂಚಿ ಕ್ಷೇತ್ರದ ಬಿಜೆಪಿ ಶಾಸಕ, ಲೂಯಿಸಿ ಮರಾಂಡಿ- ದಮ್ಕಾ ಕ್ಷೇತ್ರದ ಬಿಜೆಪಿ ಶಾಸಕ, ಚಂದ್ರ ಪ್ರಕಾಶ್ ಚೌಧರಿ-ರಾಮಘಡ ಕ್ಷೇತ್ರದ ಜೆಡಿಎಸ್ ಶಾಸಕ.

ಸಮಾರಂಭದಲ್ಲಿ ಸಚಿವ ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಛತ್ತಿಸ್‌ಘಡದ ಮುಖ್ಯಮಂತ್ರಿ ರಮಣ್‌ಸಿಂಗ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ರಾಜನಾಥ್ ಸಿಂಗ್ ಆಗಮಿಸಬೇಕಿತ್ತು. ಪ್ರತಿಕೂಲ ವಾತಾವರಣದಿಂದಾಗಿ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಟ್ವಿಟ್ ಮಾಡಿದ್ದಾರೆ.

SCROLL FOR NEXT