ದೇಶ

ಖಾತೆ ವಿವರ ಬಹಿರಂಗಪಡಿಸಿ

Lakshmi R

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿ ಹಣ ಠೇವಣಿಯಿಡುವ ಬಾಬುಗಳೇ ಎಚ್ಚರ!

ಇನ್ನು ಮುಂದೆ ಕೇಂದ್ರ ಸರ್ಕಾರದ ಎಲ್ಲ ನೌಕರರೂ ವಿದೇಶಗಳಲ್ಲಿ ತಾವಿಟ್ಟಿರುವ ಠೇವಣಿಯ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲೇಬೇಕು. ಅಷ್ಟೇ ಅಲ್ಲ, ತಮ್ಮ ಪತ್ನಿ, ಮಕ್ಕಳ ಹೆಸರಲ್ಲಿರುವ ಹಣಕಾಸಿನ ವಿವರವನ್ನೂ ಒದಗಿಸಬೇಕು. ಇದು ಲೋಕಪಾಲ ಕಾಯ್ದೆಯಲ್ಲಿನ ಹೊಸ ನಿಬಂಧನೆಗಳಲ್ಲಿ ಒಂದು.

ಲೋಕಪಾಲ ಕಾಯ್ದೆಯ ಅನ್ವಯ ಎಲ್ಲ ಸರ್ಕಾರಿ ನೌಕರರಿಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಹೊಸ ಅರ್ಜಿಯೊಂದನ್ನು ಸಿದ್ಧಪಡಿಸಿದೆ. ಅದರಲ್ಲಿ ನೌಕರರು ತಮ್ಮ ಎಲ್ಲ ಆಸ್ತಿ ಮತ್ತು ಹೊಣೆಗಾರಿಕೆಯ ವಿವರಗಳನ್ನು ಒದಗಿಬೇಕಾದ್ದು ಕಡ್ಡಾಯ. ಇದೇ ವೇಳೆ ವಿದೇಶಿ ಬ್ಯಾಂಕುಗಳಲ್ಲಿನ ಠೇವಣಿಯ ವಿವರಗಳನ್ನು ಪ್ರತ್ಯೇಕವಾಗಿ ನೀಡಬೇಕು ಎಂದು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

SCROLL FOR NEXT