ಗೃಹ ಸಚಿವರಿಗೆ ಅಬ್ದುಲ್ ಖಾನ್ ಎಂಬಾತನಿಂದ ಬೆದರಿಕೆ ಟ್ವೀಟ್ (ಸಾಂದರ್ಭಿಕ ಚಿತ್ರ) 
ದೇಶ

'ಮೆಹ್ದಿ ಕೋ ಚೋಡೋ, ನಹೀ ತೋ ಫಿರ್ ಬ್ಲಾಸ್ಟ್ ಕರೇಗಾ'

ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಬಿಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಬಾಂಬ್ ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿದ್ದಾನೆ.

ನವದೆಹಲಿ: ಮೆಹ್ದಿ ಮಸ್ರೂರ್ ಬಿಸ್ವಾಸ್‌ನನ್ನು ಬಿಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಬಾಂಬ್ ಸ್ಫೋಟಿಸುವುದಾಗಿ ದುಷ್ಕರ್ಮಿಯೊಬ್ಬ ಬೆದರಿಕೆ ಹಾಕಿದ್ದಾನೆ.

ಅಬ್ದುಲ್ ಖಾನ್ ಎಂಬಾತ ತನ್ನ ಟ್ವಿಟರ್ ಖಾತೆಯಿಂದ ಈ ಬೆದರಿಕೆ ನೀಡಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕಾನೂನು ಸಚಿವ ಡಿವಿ ಸದಾನಂದಗೌಡ ಅವರ ಟ್ವಿಟರ್ ಖಾತೆಗೆ ಬೆದರಿಕೆ ರವಾನಿಸಿದ್ದಾನೆ. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಿಸಿದ್ದು ನಾನೇ..ಮೆಹ್ದೀಯನ್ನು ಬಿಡದಿದ್ದರೆ ಇನ್ನೆರಡು ದಿನದಲ್ಲಿ ಮತ್ತೆ ಬಾಂಬ್ ಸ್ಫೋಟ ಮಾಡುವುದಾಗಿ ಅಬ್ದುಲ್ ಖಾನ್ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

'ಹೇ ಸಾಲೆ ತುಮೆ ಕ್ಯಾ ಬಾತ್ ಕರ್ತೆ, ಕರ್ತೆ ಭೀ ಕುಚ್ ನಹೀ... ಬೆಂಗಲೊರ್ ಬ್ಲಾಸ್ಟ್ ಮೈನೇ ಕಿಯಾ.. ಮೆಹ್ದೀ ಕೋ ಚೋಡೋ, ನಹೀ ತೋ ಬ್ಲಾಸ್ಟ್ ಕರ್ತೆ ರಹೇಗಾ... ದೇಕೋ 2 ದಿನ್ ಕೆ ಬಾದ್ ಫಿರ್ ಬ್ಲಾಸ್ಟ್ ಕರೇಗಾ..' ಎಂದು ಅಬ್ದುಲ್ ಖಾನ್ ಟ್ವೀಟ್ ಮಾಡಿದ್ದಾನೆ.

ಇನ್ನು ತನ್ನ ಟ್ವೀಟ್ ನಲ್ಲಿ ಕೇಂದ್ರ ಸಚಿವರ ವಿರುದ್ಧ ತುಚ್ಛಪದಗಳನ್ನು ಬಳಕೆ ಮಾಡಿರುವ ಅಬ್ದುಲ್ ಖಾನ್, ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಕೇವಲ ಮಾತು ಮಾತ್ರ ಆಡುತ್ತೀರಿ. ನಿಮಗೆ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಸವಾಲು ಹಾಕಿದ್ದಾನೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಡಿವಿ ಸದಾನಂದಗೌಡ ಸೇರಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರಿಗೂ ಕೂಡ ಅಬ್ದುಲ್ ಖಾನ್ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ವಿಚಾರವಾಗಿ ರಾಜನಾಥ್ ಸಿಂಗ್ ಅವರಿಗೆ ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಮಾಹಿತಿ ನೀಡಲಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರೊಂದಿಗೂ ಕೂಡ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಪ್ರಸ್ತುತ ದುಷ್ಕರ್ಮಿ ಅಬ್ದುಲ್ ಖಾನ್ ಟ್ವಿಟರ್ ಖಾತೆಯನ್ನು ವಜಾಗೊಳಿಸಲಾಗಿದ್ದು, ಟ್ವೀಟ್ ಬಂದ ಐಪಿ ವಿಳಾಸದ ಪ್ರಾದೇಶಿಕ ಮಾಹಿತಿಗಾಗಿ  ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT