ದೇಶ

ಶೀಘ್ರವೇ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ

Lakshmi R

ಕ್ಯಾಲಿಫೋರ್ನಿಯಾ(ಅಮೆರಿಕ): ಪ್ರಧಾನಿ ನರೇಂದ್ರ ಮೋದಿಯವರ ಕನಸಿನ 'ಡಿಜಿಟಲ್ ಇಂಡಿಯಾ' ಯೋಜನೆಗೆ ವಿಶ್ವದ ನಂಬರ್ ಒನ್ ಕಂಪನಿ ಗೂಗಲ್ ಕೈಜೋಡಿಸಿದೆ.

ಈ ಹಿನ್ನೆಲೆಯಲ್ಲಿ, ಭಾರತದಲ್ಲಿ ಆಪ್ಟಿಕಲ್ ಫೈಬರ್ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲು ಸಂಸ್ಥೆ ನಿರ್ಧರಿಸಿದ್ದು, ಮುಂಬರುವ ವರ್ಷ ಅತಿ ಕಡಿಮೆ ವೆಚ್ಚದಲ್ಲಿ, ದೇಶದ ಹಳ್ಳಿ ಹಳ್ಳಿಗೂ ಅತಿ ವೇಗದ ಇಂಟರ್ನೆಟ್ ಸೇವೆಯನ್ನು ಗ್ರಾಹಕರಿಗೆ ನೀಡುವ ಮಹದೋದ್ದೇಶವನ್ನು ಹೊಂದಲಾಗಿದೆ.

ಇದು ಸಾಧ್ಯವಾದರೆ, 2015ರಲ್ಲಿ ಭಾರತ, ವಿಶ್ವ ಭೂಪಟದಲ್ಲಿ ಇಂಟರ್ನೆಟ್‌ನ ಹೊಸ ಸ್ವರ್ಗವಾಗಿ ಮಾರ್ಪಡಲಿದೆ.

ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಗೂಗಲ್ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.

ಟೆಲಿಕಾಂ ಇಲಾಖೆಯ ಲೈಸನ್ಸ್ ಇಲ್ಲದೆಯೇ ಭಾರತದಲ್ಲಿ ಇಂಟರ್ನೆಟ್ ಸಂಪರ್ಕ ನೀಡಲು ಅವಕಾಶ ನೀಡಬೇಕೆಂದು ಗೂಗಲ್ ಸಂಸ್ಥೆ ಕೇಂದ್ರ ಸರ್ಕಾರವನ್ನು ಕೋರಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಏನದು ಯೋಜನೆ?: 2012ರ ಫೆಬ್ರವರಿಯಲ್ಲಿ ಗೂಗಲ್ ಸಂಸ್ಥೆ ಅಮೆರಿಕದಲ್ಲಿ ಆಪ್ಟಿಕಲ್ ಫೈಬರ್ ಆಧಾರಿತ ಇಂಟರ್ನೆಟ್ ಸೇವೆ ಹಾಗೂ ಟೆಲಿವಿಷನ್ ಸೇವೆಯನ್ನು ಆರಂಭಿಸಿತ್ತು. ಇದರಿಂದ ಮಾಹಾನಗರಗಳಿಂದ ದೂರವಿರುವ ಸಣ್ಣಪುಟ್ಟ ನಗರಗಳಿಗೂ ವೇಗದ ಇಂಟರ್ನೆಟ್ ಸೇವೆ ನೀಡುವುದು ಸಾಧ್ಯವಾಗಿತ್ತು.

ಮೊದಲು ಪ್ರಾಯೋಗಿಕವಾಗಿ ಇದನ್ನು ಕ್ಯಾನ್‌ಕಾಸ್ ನಗರದಲ್ಲಿ ಆರಂಭಿಸಲಾಯಿತು. ಈ ಯೋಜನೆಯು ಈಗ ಯಶಸ್ವಿಯಾಗಿದ್ದು, ಮುಂದೆ ಈ ಯೋಜನೆಯನ್ನು ಅಮೆರಿಕದ 34 ಪ್ರದೇಶಗಳಿಗೆ ವಿಸ್ತರಿಸುವುದಾಗಿ ಗೂಗಲ್ ಹೇಳಿದೆ.

SCROLL FOR NEXT