ಸಾಂದರ್ಭಿಕ ಚಿತ್ರ 
ದೇಶ

ಆತ್ಮಾಹುತಿ ದಾಳಿ: 15 ಸಾವು, 26 ಜನರಿಗೆ ಗಾಯ

ಉತ್ತರ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬರ್ ಮಂಗಳವಾರ ನಡೆಸಿದ...

ಬಾಗ್ದಾದ್: ಉತ್ತರ ಬಾಗ್ದಾದ್‌ನಲ್ಲಿ ಆತ್ಮಾಹುತಿ ಬಾಂಬರ್ ಮಂಗಳವಾರ ನಡೆಸಿದ ದಾಳಿಗೆ 15 ಜನ ಶಿಯಾ ಯಾತ್ರಿಕರು ಬಲಿಯಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ.

ಇರಾಕ್ ಸಾರ್ವಜನಿಕರು ಸೇರಿದಂತೆ ಇತರೆ ದೇಶದ ನಾಗರೀಕರು ಸಮರ್ರಾಗೆ ಹೋಗಲು ಯಾತ್ರೆ ಮುಂದುವರೆಸಿದ್ದು, ಹೋಗುವ ದಾರಿಯಲ್ಲಿ ಟೆಂಟ್‌ಗಳನ್ನು ಹೂಡಿ ಯಾತ್ರೆ ಕೈಗೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಅನಾಮಿಕ ವ್ಯಕ್ತಿಯೊಬ್ಬರು ಬಾಂಬ್ ಸ್ಫೋಟಿಸಿದ್ದಾರೆ. ಘಟನೆ ವೇಳೆ ಟೆಂಟ್‌ಗಳಲ್ಲಿದ್ದ 15 ಜನರು ಸಾವನ್ನಪ್ಪಿದ್ದು, 27 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಮರ್ರಾಗೆ ನಡೆದುಕೊಂಡು ಹೋಗುತ್ತಿದ್ದ ಯಾತ್ರಿಕರಿಗೆ  ಊಟ, ಹಣ್ಣು ಹಾಗೂ ಟೀ ನೀಡಲಾಗುತ್ತಿತ್ತು. ಈ ವೇಳೆ ಮುಸುಕುಧಾರಿಯಾಗಿ ಬಂದ ಅನಾಮಿಕನೊಬ್ಬನು ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟಿಸಿಕೊಂಡನು ಎಂದು ದಾಳಿ ವೇಳೆ ಗಾಯಗೊಂಡ ಸಜ್ಜಿದ್(25) ಹೇಳಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಗಳು ಗಾಯಗೊಂಡ ಯಾತ್ರಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT