ಕೊಲ್ಕತಾ: ಶಾರದ ಚಿಟ್ ಫಂಡ್ ಹಗರಣ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಯಾರಾದರೂ ಬಂಧಿಸಿದರೆ ಇಡೀ ಪಶ್ಚಿಮ ಬಂಗಾಳವೇ ಹೊತ್ತಿ ಉರಿಯುತ್ತದೆ ಎಂದು ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಇದ್ರಿಸ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿನ್ನೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಇದ್ರಿಸ್ ಅಲಿ, ಮಮತಾ ಬಾನ್ಯರ್ಜಿಯವರನ್ನು ಯಾರು ಮುಟ್ಟಲಾಗದು. ಒಂದೇ ವೇಳೆ ಅವರನ್ನು ಮುಟ್ಟಿದ್ರೆ, ಇಡೀ ಪಶ್ಚಿಮ ಬಂಗಾಳವೇ ಸುಟ್ಟು ಭಸ್ಮವಾಗಲಿದೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಇದೀಗ ತೀವ್ರ ಖಂಡನೆ ವ್ಯಕ್ತವಾಗಿದೆ.
ಶಾರದ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದರು, ಶಾಸಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಟಿಎಂಸಿ, ಬಿಜೆಪಿ ನಡುವೆ ದ್ವೇಷದ ಜ್ವಾಲೆ ಹೊಗೆಯಾಡುತ್ತಿದೆ. ಇಂಥ ಸಮಯದಲ್ಲಿ ಇದ್ರಿಸ್ ಅಲಿ ವಿವಾದಾತ್ಮಕ ಹೇಳಿಕೆ ನೀಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.